Breaking News

ಕುಳಿತಲ್ಲಿಂದಲೇ ನೋಡಬಹುದು ಲೋಕಸಭೆ ಕಲಾಪ.

Cnewstv.in / 22.12.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಕುಳಿತಲ್ಲಿಂದಲೇ ನೋಡಬಹುದು ಲೋಕಸಭೆ ಕಲಾಪ.

ನವದೆಹಲಿ : ಸಂಸತ್‌ನ ಉಭಯ ಸದನ ಕಲಾಪಗಳ ನೇರ ಪ್ರಸಾರವನ್ನು ಕುಳಿತಲ್ಲಿಂದಲೇ ಮೊಬೈಲ್‌ ಮೂಲಕ ವೀಕ್ಷಿಸಲು ಕೇಂದ್ರ ಸರ್ಕಾರ ಹೊಸದಾಗಿ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದೆ.

“ಎಲ್‌ಎಸ್‌ ಮೆಂಬರ್‌ ಆ್ಯಪ್‌’’ ಈ ಆ್ಯಪ್ ಮೂಲಕ ಜನರು ಲೋಕಸಭೆಯ ಅಧಿವೇಶನವನ್ನು ನೇರವಾಗಿ ವೀಕ್ಷಿಸಬಹುದು. ಸ್ಪೀಕರ್ ಓಂ ಬಿರ್ಲಾ  ಈ ಆ್ಯಪ್‌ ಅನ್ನು ಅನಾವರಣಗೊಳಿಸಿದ್ದಾರೆ. ವಿಪಕ್ಷಗಳ ಪ್ರತಿಭಟನೆಯ ನಡುವೆಯೇ ನಡೆಯುತ್ತಿದ್ದ ಪ್ರಶ್ನೋತ್ತರ ಕಲಾಪದಲ್ಲಿ ಸ್ಪೀಕರ್‌ ‘ಎಲ್‌ಎಸ್‌ ಮೆಂಬರ್‌ ಆ್ಯಪ್‌’ ಅನ್ನು ಪರಿಚಯಿಸಿದರು.

ಈ ಆ್ಯಪ್‌ ಮೂಲಕ ಪ್ರಶ್ನೋತ್ತರಗಳು, ವಿವಿಧ ಸಮಿತಿಗಳ ವರದಿಗಳು ಸೇರಿದಂತೆ ಸಂಸದೀಯ ದಾಖಲೆಗಳನ್ನೂ ನೋಡಬಹುದು.‌

ಈ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸದಸ್ಯರಿಗೆ ಸೂಚಿಸಿರುವ ಅವರು, ತಮ್ಮ ತಮ್ಮ ಕ್ಷೇತ್ರಗಳ ಜನರಿಗೂ ಆ್ಯಪ್‌ ಬಳಸುವಂತೆ ಮನವಿ ಮಾಡಿ ಎಂದರು ಹಾಗೂ ಸದನದಲ್ಲಿ ನಿಮ್ಮ ವರ್ತನೆ ಹೇಗಿರುತ್ತದೆ ಎಂಬುದು ಜನರಿಗೂ ತಿಳಿಯಲಿ ಎಂದೂ ಹೇಳಿದ್ದಾರೆ.

ಇದನ್ನು ಒದಿ : https://cnewstv.in/?p=7188

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*