Breaking News

ದೆಹಲಿಯಲ್ಲಿ ಎರಡನೇ ಒಮಿಕ್ರೋನ್ ಪ್ರಕರಣ ಪತ್ತೆ.

Cnewstv.in / 11.12.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ದೆಹಲಿಯಲ್ಲಿ ಎರಡನೇ ಒಮಿಕ್ರೋನ್ ಪ್ರಕರಣ ಪತ್ತೆ.

ನವದೆಹಲಿ : ರಾಜಧಾನಿ ದೆಹಲಿಯಲ್ಲಿ ಎರಡನೇ ಒಮಿಕ್ರೋನ್ ಪ್ರಕರಣ ಪತ್ತೆಯಾಗಿದೆ.

ದಕ್ಷಿಣ ಆಫ್ರಿಕಾ ಮತ್ತು ಜಿಂಬಾಂಬೆ ಪ್ರಯಾಣಮಾಡಿ ಬಂದಿದ್ದ ದೆಹಲಿ ಮೂಲದ 35 ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡನೇ ಕೊರೊನಾ ರೂಪಾಂತರ ಪ್ರಕರಣ ದೃಢಪಟ್ಟಿದೆ.

ಸೋಂಕಿತ ವ್ಯಕ್ತಿಯು ಕೋವಿಡ್ ನಾ ಎರಡು ಲಸಿಕೆಗಳನ್ನು ಪಡೆದುಕೊಂಡಿದ್ದರೂ ಸಹ ಸೋಂಕು ತಗುಲಿದೆ. ಸೋಂಕಿತ ವ್ಯಕ್ತಿಯು ದೆಹಲಿಯ ಎಲ್,ಎಸ್, ಜೆ.ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ದೆಹಲಿಯಲ್ಲಿ ಕಳೆದ ವಾರ 37 ವರ್ಷದ ವ್ಯಕ್ತಿಯಲ್ಲಿ ಮೊದಲು ಒಮಿಕ್ರಾನ್ ಸೋಂಕು ಪತ್ತೆಯಾಗಿತ್ತು. ದೆಹಲಿಯ ರಾಂಚಿಯ ನಿವಾಸಿಯಾಗಿದ್ದ ಈತ ತಾಂಜಾನಿಯಾದಿಂದ ದೋಹಾಕ್ಕೆ ಪ್ರಯಾಣ ಮಾಡಿದ, ಅಲ್ಲಿಂದ ದೆಹಲಿಗೆ ಕತಾರ್ ವಿಮಾನದಲ್ಲಿ ಬಂದಿದ್ದ.‌ ಅತ ದಕ್ಷಿಣಾಫ್ರಿಕಾದಲ್ಲಿ ಜೊಹಾನ್ಸ್ ಬರ್ಗ್ ನಲ್ಲಿ ಕೆಲ ಕಾಲ ನೆಲಸಿದ ಇದರಿಂದ ಆತನಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು.

ಇದನ್ನು ಒದಿ : https://cnewstv.in/?p=7125

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*