Breaking News

ಯುವತಿಗೆ ಕಿರುಕುಳ : ಭಾರತೀಯ ಮೂಲದ ವಿದ್ಯಾರ್ಥಿನಿ ಬ್ರಿಟನ್ ವಿ.ವಿ ಯಿಂದ ಹೊರಗೆ.

Cnewstv.in / 11.12.2021/ ಬ್ರಿಟಿನ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಯುವತಿಗೆ ಕಿರುಕುಳ : ಭಾರತೀಯ ಮೂಲದ ವಿದ್ಯಾರ್ಥಿನಿ ಬ್ರಿಟನ್ ವಿ.ವಿ ಯಿಂದ ಹೊರಗೆ.

ಬ್ರಿಟನ್ : ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನು ಯುವತಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಬ್ರಿಟನ್ ನ್ಯಾಯಾಲಯವು ಅಮಾನತಿನ ಶಿಕ್ಷೆ ನೀಡಿದೆ.

22 ವರ್ಷದ ಭಾರತೀಯ ಮೂಲದ ಸಾಹಿಲ್ ಭವಾನಿ ಎಂಬಾತನ ಆಕ್ಸ್ ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾನಿಲಯದ ಯುವತಿಯನ್ನ ಹಿಂಬಾಲಿಸಿ, ಆಕೆಗೆ ನೂರು ಪುಟಗಳ ಬೆದರಿಕೆ ಪತ್ರವನ್ನು ಬರೆದಿದ್ದಾರೆ ಎಂದು ಅರೋಪಿಸಲಾಗಿದೆ.

ಆಕ್ಸ್ ಫರ್ಡ್ ಕ್ರೌನ್ ಕೋರ್ಟಿನಲ್ಲಿ ನ್ಯಾಯಾಧೀಶರಾದ ನಿಗೆಲ್ ಡಾಲಿಯವರು, ಸಾಹಿಲ್ ಭವಾನಿಗೆ ನಾಲ್ಕು ತಿಂಗಳ ಜೈಲು ಶಿಕ್ಷೆ, ಎರಡು ವರ್ಷಗಳ ಅಮಾನತು ಹಾಗೂ ಐದು ವರ್ಷಗಳ ತಡೆಯಾಜ್ಞೆಯನ್ನು ವಿಧಿಸಿದೆ. ಈಗಿರುವ ಅಮಾನತ್ತಿನ ನಿಯಮವನ್ನು ಉಲ್ಲಂಘಿಸಿದರೆ ಗರಿಷ್ಠ ಐದು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಸಾಹಿಲ್ ಭವಾನಿಗೆ ನ್ಯಾಯಾಲಯವು ಎಚ್ಚರಿಕೆ ನೀಡಿದೆ.

ಆಕ್ಸ್‌ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾನಿಲಯ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಈ ರೀತಿಯ ಶಿಕ್ಷೆಯನ್ನು ನೀಡಿದೆ ಎನ್ನಲಾಗಿದೆ.

ಇದನ್ನು ಒದಿ : https://cnewstv.in/?p=7112

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*