Cnewstv.in / 24.11.2021/ ಸ್ವೀಡನ್/ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಸ್ವೀಡನ್ ನ ಮೊದಲ ಮಹಿಳಾ ಪ್ರಧಾನಿಯಾಗಿ ಮ್ಯಾಗ್ಡಲೀನಾ ಆಂಡರ್ಸನ್ ಅಯ್ಕೆ.
ಜ್ಯೂರಿಚ್: ಸ್ವೀಡನ್ ಸಂಸತ್ತು ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಪ್ರಧಾನಿಯನ್ನು ಆಯ್ಕೆ ಮಾಡಲಾಗಿದೆ.
ಸ್ವೀಡನ್ ಸಂಸತ್ತು ರಿಕ್ಸ್‌ಡಾಗ್ ಇಂದು ಸ್ವೀಡನ್‌ನ ಸೋಶಿಯಲ್ ಡೆಮಾಕ್ರಟಿಕ್ ಲೇಬರ್ ಪಾರ್ಟಿಯ ನಾಯಕಿ, ಹಣಕಾಸು ಸಚಿವೆ ಮ್ಯಾಗ್ಡಲೀನಾ ಆಂಡರ್ಸನ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ. ದೇಶದ ಇತಿಹಾಸದಲ್ಲಿ ಉನ್ನತ ಅಧಿಕಾರ ವಹಿಸಿಕೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಮ್ಯಾಗ್ಡಲೀನಾ ಆಂಡರ್ಸನ್ ಪಾತ್ರರಾಗಿದ್ದಾರೆ.
ಡೆಮಾಕ್ರಟಿಕ್ ಲೇಬರ್ ಪಕ್ಷದ ನಾಯಕ, ಪ್ರಧಾನಿ ಸ್ಟೀಫನ್ ಲೋಫ್ವೆನ್ ಈ ವರ್ಷಾರಂಭದಲ್ಲಿ ತಮ್ಮ ಸ್ಥಾನ ತ್ಯಜಿಸಿದ್ದರು. ಇದೀಗ ಅವರ ಸ್ಥಾನಕ್ಕೆ ಮ್ಯಾಗ್ಡಲೀನಾ ಆಂಡರ್ಸನ್ ಅವರನ್ನು ಆಯ್ಕೆಮಾಡಲಾಗಿದೆ.
ಮ್ಯಾಗ್ಡಲೇನಾ ಅವರ ಹೆಸರನ್ನು ಪ್ರಧಾನಿ ಹುದ್ದೆಗೆ ಘೋಷಣೆ ಮಾಡುತ್ತಿದ್ದಂತೆ ಸಂಸತ್ತಿನ ಎಲ್ಲಾ ವಿಭಾಗಗಳ ಪ್ರತಿನಿಧಿಗಳು, ಅಧಿಕಾರಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ್ದಾರೆ ಎಂದು ಸ್ವೀಡನ್ ಮಾಧ್ಯಮ ವರದಿ ಮಾಡಿದೆ.
ಸ್ವೀಡನ್‌ನ ಸಂಸತ್ತು ರಿಕ್ಸ್‌ಡಾಗ್ 349 ಸದಸ್ಯ ಬಲ ಹೊಂದಿದ್ದು, ಆಂಡರ್ಸನ್ ಅವರ ಉಮೇದುವಾರಿಕೆ ಪರವಾಗಿ 117 ಮತ ಚಲಾವಣೆಯಾದರೆ, 174 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು ಮತ್ತು 57 ಸದಸ್ಯರು ಗೈರುಹಾಜರಾಗಿದ್ದರು.
ಈ ಬೆಳವಣಿಗೆಯು ಸ್ವೀಡನ್‌ನಲ್ಲಿ ಒಂದು ಮೈಲಿಗಲ್ಲು ಎನ್ನಲಾಗಿದೆ. ಲಿಂಗಸಂಬಂಧಿ ವಿಚಾರಗಳಲ್ಲಿ ಯುರೋಪಿನ ಅತ್ಯಂತ ಪ್ರಗತಿಪರ ರಾಷ್ಟ್ರಗಳಲ್ಲಿ ಒಂದಾಗಿರುವ ಸ್ವೀಡನ್‌ನಲ್ಲಿ ಇದುವರೆಗೆ ರಾಜಕೀಯದ ಉನ್ನತ ಹುದ್ದೆಯಲ್ಲಿ ಮಹಿಳೆಯರಿಗೆ ಸ್ಥಾನ ದೊರೆತಿರಲಿಲ್ಲ.
ಇದನ್ನು ಒದಿ : https://cnewstv.in/?p=6888
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments