Cnewstv.in / 15.11.2021/ ನವದೆಹಲಿ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನವದೆಹಲಿ : ರಾಜ್ಯದಲ್ಲಿ ಮಕ್ಕಳ ಮೇಲಿನ ಸೈಬರ್ ಅಪರಾಧಗಳ ಪ್ರಕರಣಗಳ ಸಂಖ್ಯೆಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ ಹಾಗೂ ದೇಶದಲ್ಲಿ ಅತಿ ಹೆಚ್ಚು ಅಪರಾಧಗಳನ್ನು ವರದಿ ಮಾಡುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.
ರಾಷ್ಟ್ರೀಯ ಅಪರಾಧಗಳ ದಾಖಲೆಯ ಬ್ಯೂರೋ ಪ್ರಕಾರ ರಾಜ್ಯದಲ್ಲಿ ಕಳೆದ ವರ್ಷಕ್ಕಿಂತಲೂ 2020 ರಲ್ಲಿ ಮಕ್ಕಳ ಮೇಲಿನ ಸೈಬರ್ ಅಪರಾಧಗಳ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 1.340 ರಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ 2020ರಲ್ಲಿ ಮಕ್ಕಳ ಮೇಲೆ ಒಟ್ಟು 144 ಸೈಬರ್ ಅಪರಾಧಗಳು ವರದಿಯಾಗಿದೆ.
ದೇಶದಲ್ಲಿ ಪತ್ತೆಯಾಗಿರುವ ಅತಿ ಹೆಚ್ಚು ಪ್ರಕರಣಗಳ ಪೈಕಿ ಮಹಾರಾಷ್ಟ್ರ 207 ಪ್ರಕರಣಗಳು ದಾಖಲಾಗಿದ್ದು ಮೊದಲ ಸ್ಥಾನದಲ್ಲಿದೆ. ಉತ್ತರಪ್ರದೇಶದಲ್ಲಿ 197 ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕದಲ್ಲಿ 144 ಪ್ರಕರಣಗಳು ದಾಖಲಾಗಿದ್ದು, ಕೇರಳದಲ್ಲಿ 126 ಪ್ರಕರಣಗಳು ದಾಖಲಾಗಿದ್ದು, ಒಡಿಸ್ಸಾದಲ್ಲಿ 71 ಪ್ರಕರಣಗಳು ದಾಖಲಾಗಿದೆ. ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿರುವ ದೇಶದ ಐದು ರಾಜ್ಯಗಳು.
ರಾಜ್ಯದಲ್ಲಿ ವರದಿಯಾದ 144 ಪ್ರಕರಣಗಳಲ್ಲಿ 122 ಮಕ್ಕಳನ್ನು ಸೈಬರ್ ಫೋನೋಗ್ರಫಿಗೆ ಸಂಬಂಧಿಸಿದ್ದಾಗಿದೆ. ಕೊರೊನಾ ಲಾಕ್ ಡೌನ್ ಬಳಿಕ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಜನರು ಮನೆಯಲ್ಲಿಯೇ ಇರುವಂತಾಗಿತ್ತು ಹೀಗಾಗಿ ಅಪರಾಧಿಗಳು ಅಪರಾಧ ಕೃತ್ಯಗಳಲ್ಲಿ ತೊಡಗಿಸಲು ಅವಕಾಶಗಳು ಹೆಚ್ಚಾಗಿ ದೊರೆತಂತಾಗಿದೆ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ
ಇದನ್ನು ಒದಿ : https://cnewstv.in/?p=6806
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv