Breaking News

ಕೋವಿಡ್ 19 ಲಸಿಕೆ ಪಡೆದು, ಕೋಟಿ ಒಡತಿಯಾದ ಯುವತಿ.

Cnewstv.in / 10.11.2021/ ಆಸ್ಟ್ರೇಲಿಯಾ/ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಪ್ರಪಂಚದಾದ್ಯಂತ ಕೊರೊನಾ ಲಸಿಕೆಯನ್ನು ಪಡೆಯುವಂತೆ ಅಭಿಯಾನ, ಆಂದೋಲನಗಳನ್ನು ಆಯೋಜನೆ ಮಾಡಲಾಗುತ್ತಿದೆ. ಅಂತೆಯೇ ಆಸ್ಟ್ರೇಲಿಯಾ ಸರ್ಕಾರ ವಾಕ್ಸಿನೇಶನ್ ದರವನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಅಭಿಯಾನವನ್ನು ಆಯೋಜನೆ ಮಾಡಿದೆ.

ಅಭಿಯಾನವನ್ನು ಆರಂಭ ಮಾಡಿತು. ಲಕ್ಷಾಂತರ ಆಸ್ಟ್ರೇಲಿಯನ್ ಈ ಅಭಿಯಾನದಲ್ಲಿ ಭಾಗವಹಿಸಿದ್ದರು. ವರದಿಯ ಪ್ರಕಾರ ಅಕ್ಟೋಬರ್ 31ರ ವೇಳೆಗೆ ಸುಮಾರು 2,744,974 ಆಸ್ಟ್ರೇಲಿಯನ್ನರು ನೊಂದಾಯಿಸಿಕೊಂಡಿದ್ದಾರೆ. ಈ ಅಭಿಯಾನದಲ್ಲಿ ಮಹಿಳೆಯೊಬ್ಬಳು ಬಹುಮಾನ ಪಡೆದು ಮಿಲಿಯನ್ ಡಾಲರ್ ಒಡತಿಯಾಗಿದ್ದಾಳೆ.

ಜೋನ್ನ ಝು ಎಂಬ ಮಹಿಳೆ ಕೊರೋನಾ ಲಸಿಕೆಯನ್ನು ಪಡೆದು. 7.4 ಕೋಟಿ ರೂಪಾಯಿಗಳನ್ನ ಬಹುಮಾನವಾಗಿ ಗೆದ್ದಿದ್ದಾರೆ.

ಅಲ್ಲಿನ ಮಾಧ್ಯಮವೊಂದರಲ್ಲಿ ಮಾತನಾಡಿದ ಜೋನ್ನ ಝು, “ನಾನು ನನ್ನ ಕುಟುಂಬಕ್ಕಾಗಿ ಉಡುಗೊರೆಗಳನ್ನು ಖರೀದಿಸುತ್ತೇನೆ.‌ ಹೊಸ ವರ್ಷವನ್ನು ನನ್ನ ಕುಟುಂಬದೊಂದಿಗೆ ಪಂಚತಾರಾ ಹೋಟೆಲ್ ನಲ್ಲಿ ಆಚರಿಸಲು ಬಯಸುತ್ತೇನೆ. ಉಳಿದ ಹಣವನ್ನು ಹೂಡಿಕೆ ಮಾಡುತ್ತೇನೆ ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಹಣವನ್ನು ಗಳಿಸಬಹುದು ಮತ್ತು ಜನರಿಗೆ ಸಹಾಯ ಮಾಡುತ್ತೇನೆ”

ಇದನ್ನು ಒದಿ : https://cnewstv.in/?p=6753

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*