Cnewstv.in / 7.11.2021/ ಮುಂಬೈ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಆರ್ಯನ್ ಖಾನ್ ಬಂಧನದ ಹಿಂದೆ ಬಿಜೆಪಿ ನಾಯಕರ ಮಾಸ್ಟರ್ ಮೈಂಡ್ – ನವಾಬ್ ಮಲಿಕ್
ಮುಂಬೈ: ಮುಂಬೈನ ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಹಿಂದೆ ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಮಾಸ್ಟರ್ ಮೈಂಡ್ ಇದೆ. ಆರ್ಯನ್ ಖಾನ್ ಅವರನ್ನು ಕಿಡ್ನಾಪ್ ಮಾಡಿ, ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು ಎಂದು ಕಾಂಗ್ರೆಸ್ ಪಾರ್ಟಿ ಮುಖಂಡ ನವಾಬ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನವಾಬ್ ಮಲಿಕ್, “ಆರ್ಯನ್ ಖಾನ್ ಕ್ರೂಸ್ ಪಾರ್ಟಿಗೆ ಟಿಕೆಟ್ ಖರೀದಿಸಿಲ್ಲ. ಪ್ರತೀಕ್ ಗಾಬಾ ಮತ್ತು ಅಮೀರ್ ಫರ್ನಿಚರ್ವಾಲಾ ಅವರನ್ನು ಅಲ್ಲಿಗೆ ಕರೆತಂದರು. ಇದು ಅಪಹರಣ ಮತ್ತು ಸುಲಿಗೆಯ ವಿಚಾರವಾಗಿದೆ. ಮೋಹಿತ್ ಕಾಂಬೋಜ್ ಇದರ ಮಾಸ್ಟರ್ ಮೈಂಡ್. ಇದರಲ್ಲಿ ಸಮೀರ್ ವಾಂಖೆಡೆ ಪಾಲುದಾರ” ಎಂದು ಆರೋಪಿಸಿದ್ದಾರೆ.
ಆರ್ಯನ್ ಅರೆಸ್ಟ್ ಆದ ಬಳಿಕ ನಡೆದ ಘಟನೆಗಳಿಂದ ಸಮೀರ್ ವಾಂಖೆಡೆ ಭಯಗೊಂಡರು. ಹಾಗಾಗಿ ಅ.7ರಂದು ಓಶಿವಾರಾ ಸ್ಮಶಾನದ ಬಳಿ ಮೋಹಿತ್ ಮತ್ತು ಸಮೀರ್ ಭೇಟಿ ಆಗಿದ್ದರು. ಅವರ ಅದೃಷ್ಟಕ್ಕೆ ಅಲ್ಲಿನ ಸಿಸಿಟಿವಿ ಹಾಳಾಗಿತ್ತು. ಹಾಗಾಗಿ ಅದಕ್ಕೆ ಸೂಕ್ತ ಸಾಕ್ಷಿ ಸಿಗಲಿಲ್ಲ.
ಮೊದಲ ದಿನದಿಂದ ಶಾರುಖ್ ಖಾನ್‌ಗೆ ಬೆದರಿಕೆ ಹಾಕಲಾಗಿದೆ ಎಂದು ನವಾಬ್ ಮಲಿಕ್ ಹೇಳಿಕೊಂಡಿದ್ದು, ಕ್ರೂಸ್ ಡ್ರಗ್ ಪ್ರಕರಣದಲ್ಲಿ ಸುಲಿಗೆ ಆರೋಪದಲ್ಲಿ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಹೆಸರು ಕೇಳಿಬಂದಿದ್ದರಿಂದ ಬಾಲಿವುಡ್ ಸೂಪರ್‌ಸ್ಟಾರ್ ಇನ್ನೂ ಬಹಿರಂಗವಾಗಿ ಮಾತನಾಡದಂತೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನು ಒದಿ : https://cnewstv.in/?p=6728
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv