Cnewstv.in /23.10.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನವಹೆಹಲಿ : ದೇಶದಲ್ಲಿ ಈಗಾಗಲೇ ನೂರು ಕೋಟಿ ಜನರಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದೆ. ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಕಂಪನಿಗಳು ಪ್ರಯೋಗಗಳನ್ನು ನಡೆಸುತ್ತಿದೆ. ಅದರಲ್ಲಿ ಫೈಜರ್ ಕಂಪನಿಯು ಹೆಚ್ಚು ಪರಿಣಾಮಕಾರಿಯಾಗಿದೆ ಹಾಗೂ ಡಿಸೆಂಬರ್ ನಲ್ಲಿ ಮಕ್ಕಳಿಗೆ ಫೈಜರ್ ಲಸಿಕೆಯನ್ನು ನೀಡಬಹುದು ಎಂದು ಕಂಪನಿ ತಿಳಿಸಿದೆ.
ಫೈಜರ್ ಬಯೋಟೆಕ್ ಕಂಪನಿ ನಡೆಸಿದ ಪ್ರಯೋಗದಲ್ಲಿ 5 ರಿಂದ 11 ವರ್ಷದ ಮಕ್ಕಳಲ್ಲಿ ಫೈಜರ್ ಲಸಿಕೆ ಶೇ.90.7 ರಷ್ಟು ಪರಿಣಾಮಕಾರಿಯಾಗಿದೆ. ಕೊರೊನಾ ಚಿಕಿತ್ಸೆ ಪಡೆದ ಹಾಗೂ ಲಸಿಕೆ ಪಡೆದ ಮಕ್ಕಳ ರೋಗನಿರೋಧಕ ಶಕ್ತಿಯನ್ನು ಪರೀಕ್ಷೆ ಮಾಡಲಾಗಿತ್ತು ಇದರಲ್ಲಿ ಚಿಕಿತ್ಸೆ ಪಡೆದ ಮಕ್ಕಳ ಜೊತೆ ಹೋಲಿಸಿದರೆ ಲಸಿಕೆ ಪಡೆದ ಮಕ್ಕಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.
ಮಕ್ಕಳಲ್ಲಿ ಫೈಜರ್ ಲಸಿಕೆಯು ಹೆಚ್ಚು ಪರಿಣಾಮಕಾರಿಯಾದ ಹಿನ್ನೆಲೆಯಲ್ಲಿ ಡಿಸೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆಗಳನ್ನು ನೀಬಹುದು ಎಂದು ಕಂಪನಿಯು ತಿಳಿಸಿದೆ.
ಇದನ್ನು ಒದಿ : https://cnewstv.in/?p=6575
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments