Breaking News

ಸ್ವಿಗ್ಗಿ ಮಹಿಳಾ ಡೆಲವರಿ ಏಜೆಂಟ್ ಗಳಿಗೆ ಗುಡ್ ನ್ಯೂಸ್.

Cnewstv.in /23.10.2021/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬೆಂಗಳೂರು : ಭಾರತದ ಅತಿ ದೊಡ್ಡ ಪುಡ್ ಡೆಲವರಿ ಸಂಸ್ಥೆ ಸ್ವಗ್ಗಿ ತನ್ನ ಮಹಿಳಾ ಉದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಿದೆ.

ಸ್ವಿಗ್ಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಡೆಲವರು ಏಜೆಂಟ್ ಗಳಿಗೆ ವೇತನ ಸಹಿತ ರಜೆ ಘೋಷಿಸಿದೆ. ಮಹಿಳಾ ಡೆಲವರಿ ಏಜೆಂಟ್ ಗಳಿಗೆ ತಮ್ಮ ಮುಟ್ಟಿನ ಸಮಯದಲ್ಲಿ ಎರಡು ದಿನಗಳು ಸಂಬಳದ ಜೊತೆ ರಜೆ ನೀಡುವುದಾಗಿ ಘೋಷಿಸಿದೆ.

ಸ್ವಿಗ್ಗಿ ಸಂಸ್ಥೆಯಲ್ಲಿ ಸದ್ಯ ಸಾವಿರಕ್ಕೂ ಹೆಚ್ಚು ಮಹಿಳೆಯರು ಡೆಲವರಿ ಏಜೆಂಟ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮುಟ್ಟಿನ ಸಮಯದಲ್ಲಿ ತೆಗೆದುಕೊಂಡ ರಜೆಯನ್ನು ಪ್ರಶ್ನಿಸದೆ ಸಂಬಳವನ್ನು ನೀಡುವುದಾಗಿ ಸ್ವಿಗ್ಗಿ ಸಂಸ್ಥೆ ತಿಳಿಸಿದೆ. ಮಹಿಳಾ ಉದ್ಯೋಗಿಗಳಿಗೆ ಆರಾಮದಾಯಕ ವಾತಾವರಣ ಸೃಷ್ಟಿಸಲು ಸ್ವಿಗ್ಗಿ ಸಂಸ್ಥೆ ಈ ನಿರ್ಣಯ ಕೈಗೊಂಡಿದೆ.

ಅಷ್ಟೇ ಅಲ್ಲಾ ಸ್ವಿಗ್ಗಿ ದೇಶದ ಹಲವಾರು ರೆಸ್ಟೋರೆಂಟ್ ಹಾಗೂ ಪೆಟ್ರೋಲ್ ಬಂಕ್ ಗಳಲ್ಲಿ ಮಹಿಳಾ ಹಾಗೂ ಪುರುಷ ಆಹಾರ ವಿತರಕರಿಗೆ ಟಾಯ್ಲೆಟ್ ಪ್ರವೇಶ ಒದಗಿಸಲು ಅನುಮತಿ ಪಡೆದಿದೆ.

ಇದನ್ನು ಒದಿ : https://cnewstv.in/?p=6573

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*