Breaking News

Houston : ಟೇಕಾಫ್ ವೇಳೆ ಸ್ಪೋಟಗೊಂಡ ವಿಮಾನ.

Cnewstv.in /21.10.2021/ ಹೂಸ್ಟನ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಹೂಸ್ಟನ್ : ಅಮೆರಿಕದ ಹೂಸ್ಟನ್ ವಿಮಾನನಿಲ್ದಾಣದಲ್ಲಿ ನಿನ್ನೆ ವಿಮಾನವೊಂದರಲ್ಲಿ ಟೇಕಾಫ್ ವೇಳೆ ಸ್ಪೋಟಗೊಂಡಿದೆ.

ಮೆಕ್ ಡೂನ್ನೆಲ್ ಡೌಗ್ಲಾಸ್ MD018 ಎಂಬ ಖಾಸಗಿ ವಿಮಾನವೊಂದು ಹೂಸ್ಟನ್ ಏರ್ಪೋರ್ಟ್ ನಿಂದ 18 ಪ್ರಯಾಣಿಕರನ್ನು ಹೊತ್ತು ಟೇಕಾಫ್ ಮಾಡಲು ಪ್ರಯತ್ನಿಸುತ್ತಿದ್ದಂತೆ ವಿಮಾನ ಪತನಗೊಂಡು ಬೆಂಕಿ ಹೊತ್ತಿಕೊಂಡಿದೆ.

ಏರ್ಪೋರ್ಟ್ ಸಿಬ್ಬಂದಿಗಳು ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದನ್ನು ಗಮನಿಸಿ ತಕ್ಷಣವೇ ರಕ್ಷಣಾ ಕಾರ್ಯವನ್ನು ನಡೆಸಿದ್ದಾರೆ. ವಿಮಾನದಲ್ಲಿದ್ದ 18 ಪ್ರಯಾಣಿಕರು ಹಾಗೂ ಮೂರು ಸಿಬ್ಬಂದಿಗಳನ್ನು ರಕ್ಷಿಸಿದ್ದಾರೆ.

ಅದೃಷ್ಟವಶಾತ್ ಯಾವುದೇ ರೀತಿಯಾದಂತಹ ಪ್ರಾಣಾಪಾಯವಾಗಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಏರ್ಪೋರ್ಟ್ ಸಿಬ್ಬಂದಿಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಮುಂದಾಗದಿದ್ದರೆ 21 ಜನರು
ಸುಟ್ಟು ಕರಕಲಾಗಿದ್ದರು. ಒಟ್ಟಿನಲ್ಲಿ ಬಾರಿ ಅಪಘಾತವೊಂದು ತಪ್ಪಿದೆ.

ಇದನ್ನು ಒದಿ : https://cnewstv.in/?p=6534

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*