Cnewstv.in / 16.10.2021 / ಛತ್ತೀಸ್ ಗಡ್/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರಾಯ್ಪುರ: ಛತ್ತೀಸ್ ಗಡ್ ನ ರಾಯ್ಪುರ ರೈಲ್ವೆ ನಿಲ್ದಾಣದಲ್ಲಿ ಸ್ಫೋಟವುಂಟಾಗಿ ಸಿಆರ್ ಪಿಎಫ್ ನ 4 ಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ.
ಛತ್ತೀಸ್ ಗಡ್ ನ ರಾಯ್ಪುರ ರೈಲ್ವೆ ನಿಲ್ದಾಣದಲ್ಲಿ ಬೆಳಗಿನ ಜಾವ 6.30 ಕ್ಕೆ ಜಾರ್ಸುಗುಡಾದಿಂದ ಜಮ್ಮುವಿಗೆ ಹೋಗುವ ರೈಲು ಪ್ಲಾಟ್ ಫಾರ್ಮ್ ನಲ್ಲಿ ನಿಂತಿದ್ದಾಗ ಈ ಘಟನೆ ನಡೆದಿದೆ.
ಸಿ.ಆರ್ .ಪಿ.ಎಫ್ ವಿಶೇಷ ರೈಲಿನಲ್ಲಿ, ಇಗ್ನಿಟರ್ ಸೆಟ್ ಇರುವ ಪೆಟ್ಟಿಗೆಯೊಂದು ಕೆಳಗೆ ಬಿದ್ದ ನಂತರ ಈ ಸ್ಫೋಟವುಂಟಾಗಿದೆ ಎಂದು ರಾಯ್ಪುರ ಪೊಲೀಸ್ ಹೇಳಿದ್ದಾರೆ.
ಒಬ್ಬ ಸಿಆರ್‌ಪಿಎಫ್ ಸಿಬ್ಬಂದಿಯನ್ನು – ಒಬ್ಬ ಹೆಡ್ ಕಾನ್ಸ್‌ಟೇಬಲ್ ಅವರನ್ನು ರಾಯಪುರದ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಇದನ್ನು ಒದಿ : https://cnewstv.in/?p=6464
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments