cnewstv.in /10.10.2021/ ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಅಸ್ಸಾಂ : ಕಾರಾಗೃಹದಲ್ಲಿರುವ 85 ಕೈದಿಗಳಿಗೆ ಹೆಚ್ಐವಿ ಸೋಂಕು ತಗುಲಿರುವ ಘಟನೆ ವರದಿಯಾಗಿದೆ.
ನಗಾಂವ್ ನ ಕೇಂದ್ರ ಹಾಗೂ ವಿಶೇಷ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ಕೇಂದ್ರ ಕಾರಾಗೃಹದ 40 ಕೈದಿಗಳು ಹಾಗೂ ವಿಶೇಷ ಕಾರಾಗೃಹದ 45 ಕೈದಿಗಳಿಗೆ ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಎಚ್ಐವಿ ಪಾಸಿಟಿವ್ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಇದೇ ಜೈಲಿನಲ್ಲಿ ಕಳೆದ ತಿಂಗಳು ಆರೋಗ್ಯ ತಪಾಸಣೆ ಮಾಡಿದಾಗ 88 ಕೈದಿಗಳಿಗೆ ಹೆಚ್ಐವಿ ಪಾಸಿಟಿವ್ ಸೋಂಕು ತಗುಲಿರುವ ವರದಿಯಾಗಿತ್ತು. ಅದರಲ್ಲಿ ನಾಲ್ಕು ಜನ ಮಹಿಳಾ ಕೈದಿಗಳಿದ್ದರು.
ಇನ್ನೂ ಕಾರಾಗೃಹದಲ್ಲಿರುವ ಕೈದಿಗಳಿಗೆ ಹೆಚ್ಐವಿ ಸೋಂಕು ತಗುಲಲು ಕಾರಣವಾಗಿರುವುದು ಡ್ರಗ್ಸ್. ಎಲ್ಲಾ ಕೈದಿಗಳು ಸಹ ಡ್ರಸ್ಸಿಗೆ ಅಡಿಟ್ ಆಗಿದ್ದು ಎಲ್ಲರೂ ಒಂದೇ ಸಿರಂಜನನ್ನು ಬಳಸುವುದರಿಂದ ಸೋಂಕು ಹರಡಿದೆ ಎಂದು ತಿಳಿಸಲಾಗಿದೆ.
ಜೈಲಿನ ಒಳಗೆ ಡ್ರಗ್ಸ್ ಹೇಗೆ ಬಂತು ?? ಕಾರಾಗೃಹದಲ್ಲಿರುವವರಿಗೆ ಇಷ್ಟು ಸುಲಭವಾಗಿ ಡ್ರಗ್ಸ್ ಹೇಗೆ ಸಿಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ?!
ಇದನ್ನು ಓದಿ : https://cnewstv.in/?p=6419
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments