Breaking News

67 ವರ್ಷಗಳ ನಂತರ ತನ್ನ ಮಾಲೀಕನ ಕೈಸೇರಿದ ಏರ್ ಇಂಡಿಯಾ

Cnewstv.in / 01.10.2021/ ನವಹೆಹಲಿ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ನವದೆಹಲಿ : ಸರ್ಕಾರಿ ಒಡೆತನದಲ್ಲಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸಲು ಸರ್ಕಾರ ಬಿಡ್ ನಡೆಸಲಾಯಿತು. ಈ ಬಿಡ್ ಗೆದ್ದು ಮತ್ತೆ ಟಾಟಾ ಸಂಸ್ಥೆ ಏರ್ ಇಂಡಿಯಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದು ಯೂಮರ್ಗ ವರದಿ ಮಾಡಿದೆ.

ಬಿಡ್ ನಲ್ಲಿ ವಿವಿಧ ಸಂಸ್ಥೆಗಳು ಪಾಲ್ಗೊಂಡಿದ್ದು, ಏರ್ ಇಂಡಿಯಾ ಮೇಲೆ ನಿಯಂತ್ರಣ ಸಾಧಿಸಲು ಟಾಟಾ ಸಂಸ್ಥೆ ಪ್ರಮುಖ ಸ್ಪರ್ಧೆಯಾಗಿತ್ತು.ಅಂತಿಮವಾಗಿ ಟಾಟಾ ಸಂಸ್ಥೆಯು ಅತಿ ದೊಡ್ಡ ಮೊತ್ತ ನೀಡಿ ಏರ್ ಇಂಡಿಯಾವನ್ನು ಖರೀದಿ ಮಾಡಿದೆ.

ಮೊದಲ ಪರವಾನಗಿ ಪಡೆದ ಪೈಲಟ್ ಅಗಿದ್ದ ಜೆ ಅರ್ ಡಿ ಟಾಟಾ ಅವರು ಮೊದಲು ಏರ್ ಇಂಡಿಯಾ ವನ್ನು ಸ್ಥಾಪಿಸಿದರು. ಇದನ್ನು ಟಾಟಾ ಏರ್ ಲೈನ್ಸ್ ಎಂದು ಕರೆಯಲಾಗುತ್ತಿತ್ತು. ಸರ್ಕಾರ 1953 ರಲ್ಲಿ ವಿಮಾನಯಾನವನ್ನು ರಾಷ್ಟ್ರೀಕರಣಗೊಳಿಸಿತು.

ಟಾಟಾ ಏರ್ ಲೈನ್ಸ್ ಶೇರುಗಳಲ್ಲಿ ಶೇ. 49ರಷ್ಟು ಸರ್ಕಾರ ಖರೀದಿಸಿತು ನಂತರ ಕಂಪನಿಯ ಸಾರ್ವಜನಿಕ ಸೀಮಿತವಾಯಿತು. ನಂತರ ಟಾಟಾ ಏರ್ ಲೈನ್ಸ್, ಏರ್ ಇಂಡಿಯಾ ಎಂದು ಮರುನಾಮಕರಣ ವಾಯಿತು. ಆದರೆ ಇದೀಗ ಏರ್ ಇಂಡಿಯಾ ಮತ್ತೆ ತನ್ನ ಹಳೆಯ ಮಾಲೀಕನ ಕೈ ಸೇರಿದೆ.

ಇದನ್ನು ಓದಿ : https://cnewstv.in/?p=6301

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*