Cnewstv.in / 24.09.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನವದೆಹಲಿ : ಕೇಂದ್ರ ಸರ್ಕಾರದಿಂದ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಆ್ಯಂಡ್ರಾಯ್ಡ್ ತಂತ್ರಜ್ಞಾನ ಇರುವ ಮೊಬೈಲ್ ಗಳ ಗ್ರಾಹಕರನ್ನ ಗುರಿಯಾಗಿಸಿಕೊಂಡು, ಆದಾಯ ತೆರಿಗೆ ರೀ ಫಂಡ್ ಮಾಡಿಕೊಡಲಾಗುತ್ತದೆ ಎಂಬ ಆಕರ್ಷಕ ಸಂದೇಶಗಳಿರುವ ಟ್ರೋಜನ್ ಮಾಲ್ ವೇರ್ ದೇಶದ ಬ್ಯಾಂಕುಗಳ ಗ್ರಾಹಕರಿಗೆ ಬರುತ್ತಿದೆ.
ಇಂಡಿಯನ್ ಕಂಪ್ಯೂಟರ್ ಎಮರ್ಜನ್ಸಿ ರೆಸ್ಪೊನ್ಸ್ ಟೀಮ್, ಈ ಬಗ್ಗೆ ಎಚ್ಚರಿಕೆ ನೀಡಿದ್ದು ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಒಡೆತನದ 27 ಬ್ಯಾಂಕುಗಳ ಗ್ರಾಹಕರಿಗೆ ಇಂತಹ ಸಂದೇಶಗಳು ಬಂದಿದೆ.
ಇದಕ್ಕೆ ಡ್ರಿನಿಕ್ ಎಂದು ಹೆಸರಿಡಲಾಗಿದೆ. ಆದಾಯ ತೆರಿಗೆ ರೀ ಫಂಡ್ ಮಾಡಿಕೊಡಲಾಗುವುದು ಎಂಬ ಸಂದೇಶ ಮೊಬೈಲ್ ಗೆ ಬರುತ್ತದೆ ಅದನ್ನು ಓಪನ್ ಮಾಡಿದಾಗ, ರೀ ಫಂಡ್ ಹೆಸರಿನಲ್ಲಿ ಒಂದು ಅ್ಯಪ್ ಡೌನ್ಲೋಡ್ ಮಾಡಲು ಸೂಚಿಸುತ್ತದೆ. ಡೌನ್ ಲೋಡ್ ಮಾಡಿದ ಕೂಡಲೇ ಗ್ರಾಹಕರ ಖಾಸಗಿ ಮಾಹಿತಿಗಳು ತಿಳಿಯುತ್ತದೆ ಇದಕ್ಕೆ ಅವಕಾಶ ನೀಡಬಾರದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಇದನ್ನು ಓದಿ : https://cnewstv.in/?p=6185
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

C News TV Kannada News Online in cnewstv