Cnewstv.in / 24.09.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ನನ್ನು ಅಮೆರಿಕಾದ ವೈಟ್ ಹೌಸ್ ನಲ್ಲಿ ಭೇಟಿಯಾಗಲಿದ್ದಾರೆ.
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಏಳನೇ ಬಾರಿ ಅಮೆರಿಕ ಪ್ರವಾಸವನ್ನು ಕೈಗೊಂಡಿದ್ದಾರೆ. ಇಂದು ಅನೇಕ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಚೀನಾ ಮತ್ತು ಪಾಕಿಸ್ತಾನದ ಅಜೆಂಡಾಗಳ ಬಗ್ಗೆ ನಾಯಕರು ಚರ್ಚೆ ನಡೆಸಲಾಗುವುದು ಎನ್ನಲಾಗುತ್ತಿದೆ ಏಕೆಂದರೆ ಅಫ್ಘಾನಿಸ್ತಾನ್ ವನ್ನು ವಶಪಡಿಸಿಕೊಂಡಿರುವ ತಾಲಿಬಾನ್, ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನ ರಚಿಸಲು ಮುಂದಾಗಿದೆ. ಇದಕ್ಕೆ ಚೀನಾ ಮತ್ತು ಪಾಕಿಸ್ತಾನ ಬೆಂಬಲವನ್ನು ಘೋಷಿಸಿದೆ ಚೀನಾ ಹಣಕಾಸಿನ ನೆರವನ್ನು ಸಹ ಘೋಷಣೆ ಮಾಡಿದೆ.
ನ್ಯೂಯಾರ್ಕ್ ನಲ್ಲಿ ನಡೆಯಲಿರುವ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯನ್ನು ಸಹ ಮೋದಿ ನಾಳೆ ಭಾಗವಹಿಸಲಿದ್ದಾರೆ. ಸೆಪ್ಪೆಂಬರ್ 26ರಂದು ಭಾರತಕ್ಕೆ ಮೋದಿ ವಾಪಸ್ ಆಗಮಿಸಲಿದ್ದಾರೆ.
ಇದನ್ನು ಓದಿ : https://cnewstv.in/?p=6178
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

C News TV Kannada News Online in cnewstv