Breaking News

ಪ್ರಿಯಕರನ ಜೊತೆ ಸೇರಿ ಗಂಡನ ಹತ್ಯೆ,- ಹಂತಕರು ಸಿಕ್ಕಿಹಾಕಿಕೊಂಡಿದ್ದು ಹೇಗೆ ಗೊತ್ತಾ ??

Cnewstv.in / 21.09.2021/ ಬಿಹಾರ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬಿಹಾರ : ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನ ಹತ್ಯೆ ಮಾಡಿದ ಘಟನೆ ಬಿಹಾರದ ಸಿಕಂದೂರ್ ಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಧಾ ಹಾಗೂ ಆಕೆಯ ಪ್ರಿಯಕರ ಸುಭಾಶ್ ಸೇರಿ ತನ್ನ ಗಂಡ ರಾಕೇಶನನ್ನು ಕೊಲೆ ಮಾಡಿ, ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ರಾಸಾಯನಿಕ ಬಳಸಿ ಅದನ್ನು ವಿಲೇವಾರಿ ಮಾಡುವ ಸಮಯದಲ್ಲಿ ರಾಸಾಯನಿಕ ಸ್ಪೋಟಗೊಂಡು ಘಟನೆ ಬೆಳಕಿಗೆ ಬಂದಿದೆ.

ರಾಕೇಶ್ ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದ, ಅವನ ಮೇಲೆ ಪೊಲೀಸರ ಕಣ್ಣಿತ್ತು ಹಾಗಾಗಿ ರಾಕೇಶ ರಹಸ್ಯವಾಗಿ ನಲೆಸಿದ್ದ. ತನ್ನ ಪತ್ನಿಯನ್ನು ಒಂದು ಫ್ಲಾಟ್ ನಲ್ಲಿರಿಸಿದ್ದ.‌ ತನ್ನ ಹೆಂಡತಿಯನ್ನು ನೋಡಿಕೊಳ್ಳಲು ತನ್ನ ಬಿಜಿನೆಸ್ ಪಾರ್ಟ್ನರ್ ಸುಭಾಶ್ ಗೆ ಹೇಳಿದ್ದ. ಆಗ ಅವರಿಬ್ಬರ ನಡುವೆ ಪ್ರೀತಿಯಾಗಿ, ತಮ್ಮ ದಾರಿಗೆ ಆಡವಾಗಿರುವ ರಾಕೇಶ ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಇದಕ್ಕೆ ರಾಧಾ ಸಹೋದರಿ ಮತ್ತು ಆತನ ಗಂಡನ ಸಹಕಾರ ಸಹ ದೊರಕಿತ್ತು.

ಒಂದು ದಿನ ರಾಧಾ ಮದುವೆಗೆ ಹೋಗಬೇಕು ಎಂದು ಗಂಡನನ್ನು ಮನೆಗೆ ಕರೆಸಿ, ಆತನ ಪ್ರಿಯಕರ ಸುಭಾಶ್ ಜೊತೆಯಲ್ಲಿ ಸೇರಿ ಗಂಡ ರಾಕೆಸ್ ನ ಹತ್ಯೆ ಮಾಡಿದಳು.
ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿದರು. ನಂತರ ಪ್ಲಾಟ್ ಒಳಗಡೆ ಶವದ ವಾಸನೆ ಬರಬಾರದು ಎಂದು ರಾಸಾಯನಿಕವನ್ನು ಬಳಸಲು ಪ್ರಯತ್ನಿಸಿದ್ದರು, ಆಗ ರಾಸಾಯನಿಕ ಸ್ಫೋಟಗೊಂಡು ಹತ್ಯೆಯ ವಿಚಾರ ಬೆಳಕಿಗೆ ಬಂದಿದೆ.

ಇದನ್ನು ಓದಿ : https://cnewstv.in/?p=6136

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*