Cnewstv.in / 20.09.2021/ ಪಂಜಾಬ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಚಂಡಿಗಡ್ : ಚಮ್ ಕೌರ್ ಸಾಹಿಬ್ ಕ್ಷೇತ್ರದ ಶಾಸಕ, ದಲಿತ ಸಮುದಾಯದ ನಾಯಕ ಚರಣ್ ಜಿತ್ ಸಿಂಗ್. ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಪಂಜಾಬ್‌ನ ಮೊದಲ ದಲಿತ ಮುಖ್ಯ ಮಂತ್ರಿ ಎಂಬ ಹೆಗ್ಗಳಿಕೆ ಕೂಡ ಇವರಿಗೆ ಸಲ್ಲುತ್ತದೆ.
ಚರಣ್ ಜಿತ್ ಸಿಂಗ್ ಮೂರು ವರ್ಷದಿಂದ ಮೀಟೂ ಪ್ರಕರಣ ಎದುರಿಸುತ್ತಿದ್ದಾರೆ ಅವರು 2018ರಲ್ಲಿ ಮಹಿಳಾ ಐಎಎಸ್ ಅಧಿಕಾರಿಗೆ ಸಂದೇಶ ಕಳುಹಿಸಿದ್ದರು. ಪಂಜಾಬ್ ಮಹಿಳಾ ಆಯೋಗವು ನೋಟೀಸು ಕಳುಹಿಸಿದೆ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಬಿಜೆಪಿ ನಾಯಕ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
ನೂತನ ಮುಖ್ಯಮಂತ್ರಿಯಾದ ಬೆನ್ನಲ್ಲೇ ಆರೋಪಗಳು ಸಹ ಕೇಳಿಬರುತ್ತಿದೆ. ಮೂರು ವರ್ಷದ ಹಿಂದಿನ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ.
ಇದನ್ನು ಓದಿ : https://cnewstv.in/?p=6095
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

C News TV Kannada News Online in cnewstv