Breaking News

ಅಫ್ಘಾನಿಸ್ತಾನ ಬಾಂಬ್ ದಾಳಿ : ಮೂವರ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ.

Cnewstv.in / 19.09.2021/ ಅಫ್ಘಾನಿಸ್ತಾನ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಅಫ್ಘಾನಿಸ್ತಾನ : ಜಲಾಲಾಬಾದ್ ನಲ್ಲಿ ಸರಣಿ ಸ್ಫೋಟ ವಾಗಿದೆ. ಮೂರು ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ.

ಆಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಆಗಿನಿಂದಲೂ ಹಿಂಸಾಚಾರ ನಿಂತಿಲ್ಲ. ಜಲಾಲಾಬಾದ್ ಅಫ್ಘಾನಿಸ್ಥಾನದ ದೊಡ್ಡ ನಗರಗಳಲ್ಲಿ ಒಂದು. ಕಾಬೂಲ್ ನಿಂದ 80 ಮೈಲಿಗಳಷ್ಟು ದೂರವಿದೆ. ತಾಲಿಬಾನಿಗಳ ವಾಹನವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ.

ಸ್ಪೋಟದಲ್ಲಿ ಮೂವರು ಮೃತಪಟ್ಟಿದ್ದು, ಅದರಲ್ಲಿ ಇಬ್ಬರು ತಾಲಿಬಾನ್ ಅಧಿಕಾರಿಗಳಾಗಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಸಾಮಾನ್ಯ ಜನರು ಗಾಯಗೊಂಡಿದ್ದಾರೆ. ಇದುವರೆಗೂ ಯಾರು ಸಹ ಈ ದಾಳಿಯ ಹೊಣೆಗಾರಿಕೆಯನ್ನು ತೆಗೆದುಕೊಂಡಿಲ್ಲ.

ಇದನ್ನು ಓದಿ : https://cnewstv.in/?p=6082

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*