Cnewstv.in / 16.09.2021/ ಕಾಬೂಲ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಕಾಬೂಲ್ : ಆಫ್ಘಾನಿಸ್ಥಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ತಮ್ಮದೇ ಆದ ಸರ್ಕಾರವನ್ನ ರಚಿಸಲು ಹೊರಟಿದ್ದಾರೆ. ಹೀಗಾಗಿ ಹಲವಾರು ಹೊಸ ಹೊಸ ಕಾನೂನುಗಳನ್ನು ತರುತ್ತಿದ್ದಾರೆ. ಶರಿಯ ನಿಯಮದ ಅಡಿಯಲ್ಲಿ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದ್ದಾರೆ. ಯಾವ ತಪ್ಪಿಗೆ ಯಾವ ಶಿಕ್ಷೆ ಎಂಬುದರ ಕುರಿತು ಶಿಕ್ಷೆ ಪಟ್ಟಿಯನ್ನು ಪ್ರಕಟ ಮಾಡಿದ್ದಾರೆ.
ತಾಲಿಬಾನಿಗಳು ನೀಡುವ ಶಿಕ್ಷೆ.
*ಕಳ್ಳತನ ಮಾಡಿದವರ ಕೈಗಳನ್ನು ಕತ್ತರಿಸುವುದು.
*ಅನೈತಿಕ ಸಂಬಂಧ ಹೊಂದಿದ್ದಲ್ಲಿ ಕಲ್ಲಿನಿಂದ ಹೊಡೆಯುವುದು.
*ಉದ್ದೇಶಪೂರ್ವಕವಾಗಿ ಕೊಲೆ ಮಾಡಿದವರನ್ನು ಹತ್ಯೆ ಮಾಡುವುದು.
*ಉದ್ದೇಶರಹಿತ ಕೊಲೆಯಾಗಿದ್ದಲ್ಲಿ ಆತನಿಂದ ದಂಡ ವಸೂಲಿ ಮಾಡುವುದು.
*ಮಹಿಳೆ ಮತ್ತು ಪುರುಷ ಇಬ್ಬರು ಅನೈತಿಕ ಸಂಬಂಧದಲ್ಲಿ ತೊಡಗಿದ್ದರೆ ಅವರನ್ನು ಸಾರ್ವಜನಿಕವಾಗಿ ಹತ್ಯೆಗೈಯುವುದು.
ಇದನ್ನು ಓದಿ : https://cnewstv.in/?p=5963
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments