Cnewstv.in / 14.09.2021/ ಒರಿಸ್ಸಾ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಒರಿಸ್ಸಾ : ಗೋಧಿ ತುಂಬಿದ ಗೂಡ್ಸ್ ರೈಲು ಹಳಿ ತಪ್ಪಿ ನದಿಗೆ ಉರುಳಿ ಬಿದ್ದಿರುವ ಘಟನೆ ಒಡಿಸ್ಸಾದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಗೋಧಿಯನ್ನು ಹೊತ್ತೊಯ್ಯುತ್ತಿದ್ದ ರೈಲು ಹಳಿ ತಪ್ಪಿ ನದಿಗೆ ಬಿದ್ದಿದೆ. ಫಿರೋಜಪುರದಿಂದ ಖುದಾಗೆ ಹೋಗುತ್ತಿದ್ದ ರೈಲು ನದಿರಾ ನದಿಯ ಸಮೀಪದಲ್ಲಿ ಹಳಿತಪ್ಪಿದೆ. ರೈಲಿನ ಎಂಜಿನ್ ಟ್ರ್ಯಾಕ್ ಮೇಲೆ ಇರುವುದರಿಂದ ರೈಲು ಚಾಲಕ ಮತ್ತು ಇತರ ಸಿಬ್ಬಂದಿಗಳಿಗೆ ಯಾವುದೇ ರೀತಿಯಾದಂತಹ ಪ್ರಾಣಾಪಾಯವಾಗಿಲ್ಲ.
ರೈಲಿನ ಆರು ಬೋಗಿಗಳು ನೀರಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ಗೋಧಿ ಸಂಪೂರ್ಣವಾಗಿ ನೀರಿನ ಪಾಲಾಗಿದೆ. ರೈಲು ಅಂಗುಲ್ – ತಲ್ಚಾರ್ ಮಾರ್ಗವಾಗಿ ಸಂಚರಿಸುತ್ತಿತ್ತು.

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಹಾಗೂ ಬಿರುಗಾಳಿ ಮಳೆಯಿಂದಾಗಿ ಅಪಘಾತ ಸಂಭವಿಸಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ 12 ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದು, 12 ರೈಲುಗಳ ಮಾರ್ಗವನ್ನ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : https://cnewstv.in/?p=5927
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv