Breaking News

ಆನ್ ಲೈನ್ ಫ್ರೆಂಡ್ ಶಿಪ್ : ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ.

Cnewstv.in / 12.09.2021/ ಚೆನ್ನೈ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಚೆನ್ನೈ : ಮುಂಬೈನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವ ಮೊದಲೇ ಚೆನ್ನೈನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.

ಚೆನ್ನೈನ ಮೆಲ್ಕತಿರ್ ಪುರ ಗ್ರಾಮದ ಬಳಿ ಕಳೆದ ಎರಡು ದಿನಗಳ ಹಿಂದೆ ಚಲಿಸುತ್ತಿದ್ದ ಕಾರಿನಲ್ಲಿ 20 ವರ್ಷ ದ ಯುವತಿಗೆ ಡ್ರಗ್ಸ್ ನೀಡಿಣ ಸಾಮೂಹಿಕ ಅತ್ಯಾಚಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಖಾಸಗಿ ಮೊಬೈಲ್ ಅಂಗಡಿಯೊಂದರಲ್ಲಿ ಸಂತ್ರಸ್ತ ಯುವತಿ ಕೆಲಸಮಾಡುತ್ತಿದ್ದಳು. ಆಕೆಗೆ ಆನ್ ಲೈನ್ ಆ್ಯಪ್ ಮೂಲಕ ಗುಣಶೀಲ್ ಎಂಬ ವ್ಯಕ್ತಿಯ ಜೊತೆ ಸ್ನೇಹವಾಗಿತ್ತು.‌ ಬುದುವಾರ ಅವರಿಬ್ಬರೂ ಭೇಟಿಯಾಗಿ ಅಲ್ಲಿಂದ ಗುಣಶೀಲ್ ಫಾರಂ ಹೌಸಿಗೆ ಹೊರಟಿದ್ದರು. ಕಾರಿನಲ್ಲಿ ಯುವತಿಗೆ ತಿನ್ನಲು ಲೇಸ್ ಮತ್ತು ಸಾಫ್ಟ್ ಡ್ರಿಂಕ್ಸ್ ನೀಡಲಾಗಿತ್ತು ಅದರಲ್ಲಿ ನಿದ್ದೆ ಬರುವಂತಹ ಮತ್ತಿನ ಔಷಧಿಯನ್ನು ಗುಣಶೀಲ್ ಮತ್ತು ಆತನ ಸ್ನೇಹಿತರು ಸೇರಿಸಿ ಅತ್ಯಾಚಾರ ಮಾಡಿದ್ದಾರೆ. ನಂತರ ಯುವತಿಯನ್ನ ಚೆನ್ನೈ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಟ್ಟುಹೋಗಿದ್ದಾರೆ. ಯುವತಿ ಅಲ್ಲಿಂದ ಪಾರಾಗಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಇದನ್ನು ಓದಿ : https://cnewstv.in/?p=5892

ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಗುಣಶೀಲನ್, ಗುಣಶೇಖರ್, ಜೆಬನೇಸನ್ ಮತ್ತು ಅಜಿತ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*