Breaking News

ಅಡುಗೆ ಎಣ್ಣೆಯ ಬೆಲೆ ಇಳಿಕೆ

Cnewstv.in / 04.09.2021/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ನವದೆಹಲಿ : ಈ ವರ್ಷದ ಅಂತ್ಯದಲ್ಲಿ ಖಾದ್ಯ ತೈಲಗಳ ಬೆಲೆ ಇಳಿಕೆಯಾಗಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಧಾಂಶು ಪಾಂಡೆಯವರು ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿ ಬೆಲೆಗಳು ಏಕಾಏಕಿ ಇಳಿಮುಖವಾಗುವುದಿಲ್ಲ ಹಂತಹಂತವಾಗಿ ಇಳಿಕೆಯಾಗುತ್ತದೆ. ಕಳೆದ ಒಂದು ವರ್ಷದಿಂದ ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯಾಗಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಸಹ ಖಾದ್ಯ ತೈಲದ ಬೆಲೆ ಶೇ. 64 ರಷ್ಟು ಹೆಚ್ಚಾಗಿದೆ.

ಪ್ರಸ್ತುತ ಮಾನ್ಸೂನ್ ನಲ್ಲಿ ಬೆಳೆಯುವ ಎಣ್ಣೆ ಕಾಳುಗಳು ಈ ವರ್ಷದ ಅಂತ್ಯದ ಸಮಯಕ್ಕೆ ಮಾರುಕಟ್ಟೆಗೆ ಬರಲಿದೆ. ಜಾಗತಿಕ ಮಟ್ಟದಲ್ಲೂ ಖಾದ್ಯ ತೈಲದ ಬೆಲೆ ಕಡಿಮೆಯಾಗಿರುವುದರಿಂದ ದೇಶದಲ್ಲಿ ಲಭ್ಯವಾಗುವ ಅಡುಗೆ ಎಣ್ಣೆಯ ಬೆಲೆ ಇಳಿಕೆಯಾಗುತ್ತದೆ.

ಇದನ್ನು ಒದಿ : https://cnewstv.in/?p=5744

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*