Cnewstv.in / 03.09/2021 /ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನವದೆಹಲಿ : ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 45,352 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 366 ಜನರು ಸಾವನ್ನಪ್ಪಿದ್ದಾರೆ.
34,791 ಜನ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೇಶದಾದ್ಯಂತ 67.09 ಕೋಟಿ ಲಸಿಕಾ ಡೋಸ್ ಗಳನ್ನು ನೀಡಲಾಗಿದೆ.
ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,99,778 ಇದೆ. ಇಂದಿನ ಪಾಸಿಟಿವಿಟಿ ದರ 2.66 ಇದ್ದು, ದೈನಂದಿನ ಪಾಸಿಟಿವಿಟಿ ರೇಟ್ 2.72 ರಷ್ಟಿದೆ. ಕೊರೊನಾದಿಂದ ಈವರೆಗೆ 4,39,895 ಮಂದಿ ಸಾವನ್ನಪಿದ್ದಾರೆ.
ಇದನ್ನು ಒದಿ : https://cnewstv.in/?p=5731
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv