Cnewstv.in / 01.09/2021 / ಮುಂಬೈ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮುಂಬೈ : ಪತಿ ಪತ್ನಿಯ ನಡುವೆ ಪಾನಿಪುರಿ ವಿಚಾರವಾಗಿ ಜಗಳವಾಗಿ, ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನ ಪುಣೆಯಲ್ಲಿ ನಡೆದಿದೆ. 23 ವರ್ಷದ ಪ್ರತಿಕ್ಷಾ ಸರವಾಡೆ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
2019ರಲ್ಲಿ ಪ್ರತಿಕ್ಷಾ ಮತ್ತು ಗಹಿನಿನಾಥ್ ಮದುವೆಯಾಗಿದ್ದರು. ಶುಕ್ರವಾರ ಪ್ರತಿಕ್ಷಾಗೆ ತಿಳಿಸದಂತೆ ಪತಿ ಗಹಿನಿನಾಥ್ ಪಾನಿಪುರಿ ಪಾರ್ಸಲ್ ಮನೆಗೆ ತಂದಿದ್ದರು. ಮನೆಯಲ್ಲಿ ಅಡುಗೆ ಮಾಡಿದರು ಕೂಡ ಗಂಡ ತನಗೆ ಒಂದು ಮಾತು ಕೇಳದೆ ಪಾನಿಪುರಿ ತಂದಿದ್ದಕ್ಕೆ ಪ್ರತಿಕ್ಷಾ ಕೋಪಗೊಂಡು ಜಗಳ ಮಾಡಿ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಕ್ಷಣವೇ ಪ್ರತೀಕ್ಷಾ ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಚಿಕ್ಕ ಪಾನಿಪುರಿ ವಿಚಾರವೇ ಪ್ರತಿಕ್ಷಾ ಆತ್ಮಹತ್ಯೆಗೆ ಕಾರಣವಾಯಿತು.
ಇದನ್ನು ಒದಿ : https://cnewstv.in/?p=5707
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv