Cnewstv.in / 25.08.2021 / ಮಹಾರಾಷ್ಟ್ರ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಅವರ ಕೆನ್ನೆಗೆ ಬಾರಿಸುತ್ತಿದೆ ಎಂದು ಕೇಂದ್ರ ಸಚಿವ ನಾರಾಯಣ ರಾಣೆಯವರ ಬಹಿರಂಗವಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ನಾರಾಯಣ ರಾಣೆಯವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು.
ರಾತ್ರಿ ನಾರಾಯಣ ರಾಣೆಯವರನ್ನು ಮಹದ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.15,000 ರೂಪಾಯಿಗಳ ಜಾಮೀನು ಬಾಂಡ್ ಹಾಗೂ ಆಗಸ್ಟ್ 30 ಮತ್ತು ಸೆಪ್ಟೆಂಬರ್ 6ರಂದು ರಾಯಗಡ್ ನಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತಿನಿನ ಮೇರೆಗೆ ರಾತ್ರಿ 11:30 ಕ್ಕೆ ಜಾಮೀನು ಸಿಕ್ಕಿದೆ.
ನಾರಾಯಣ ರಾಣೆ ಯವರನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ 14 ದಿನಗಳ ಕಾಲ ನೀಡಬೇಕು ಎಂದು ಕೋರ್ಟಿಗೆ ಮನವಿ ಸಲ್ಲಿಸಿದರು. ಆದರೆ ರಾಣೆ ಪರ ವಕೀಲರು ಜಾಮೀನು ನೀಡುವಂತೆ ಕೇಳಿದ್ದರು. ಅಂತೆಯೇ ಕೋರ್ಟ್ ಷರತ್ತು ಬದ್ಧ ಜಾಮೀನು ರಾಣೆಯವರಿಗೆ ನೀಡಿದೆ. ಆದರೆ ರಾಣೆಯವರ ವಿರುದ್ಧ ಮೂರು ಕಡೆ ದಾಖಲಾಗಿರುವ ಎಫ್ ಐ ಆರ್ ರದ್ದುಗೊಳಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು ಈ ಮನವಿ ವಿಚಾರಣೆ ಮಾಡಲು ಕೋರ್ಟ್ ನಿರಾಕರಿಸಿತ್ತು.
ಇದನ್ನು ಒದಿ : https://cnewstv.in/?p=5582
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv