Breaking News

ವಿಶ್ವಸಂಸ್ಥೆ ವಾರ್ಷಿಕ ಸಮ್ಮೇಳಕ್ಕೆ ಬರಬೇಡಿ : 150 ದೇಶಗಳಿಗೆ ಅಮೇರಿಕ ಮನವಿ

Cnewstv.in / 19.08.2021 / Contact for News and Information 9916660399

ಕೋವಿಡ್ ರೂಪಾಂತರಿ ಡೆಲ್ಟಾ ಸೋಂಕು ವೇಗವಾಗಿ ಹರಡುವ ಆತಂಕ ಇರುವುದರಿಂದ ವಿಶ್ವ ಸಂಸ್ಥೆ ಆಯೋಜಿಸಿರುವ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲು 150 ದೇಶಗಳ ನಾಯಕರು ಖುದ್ಧಾಗಿ ನ್ಯೂಯಾರ್ಕ್‍ಗೆ ಬರಬೇಡಿ ಎಂದು ಅಮೆರಿಕಾ ಮನವಿ ಮಾಡಿದೆ. ವಿಶ್ವಸಂಸ್ಥೆ ತನ್ನ ಸದಸ್ಯ ಬಳಗದಲ್ಲಿರುವ 192 ದೇಶಗಳಿಗೆ ಆಹ್ವಾನ ಕಳುಹಿಸಿ ಸಭೆಯಲ್ಲಿ ಭಾಗವಹಿಸಲು ಮನವಿ ಮಾಡಿತ್ತು.

ಸೆಪ್ಟಂಬರ್ 21ರಿಂದ 27ರವರೆಗೆ ನಡೆಯುವ ಈ ಉನ್ನತ ಮಟ್ಟದ ಸಪ್ತಾಹದಲ್ಲಿ ಕೋವಿಡ್ ಸೋಂಕು ನಿಯಂತ್ರಣ, ಲಸಿಕೆ, ಆಹಾರ ಪದ್ಧತಿ, ಹವಾಮಾನ ಬದಲಾವಣೆ, ಇಂಧನ ಸೇರಿದಂತೆ ಹಲವಾರು ಮಹತ್ವದ ವಿಷಯಗಳು ಚರ್ಚೆಯಾಗಲಿದ್ದವು. ಆದರೆ ಎಲ್ಲಾ ಸದಸ್ಯ ರಾಷ್ಟ್ರಗಳು ಸಭೆಯಲ್ಲಿ ಭಾಗವಹಿಸಬೇಕು, ಆದರೆ ಅನಗತ್ಯವಾಗಿ ಖುದ್ಧಾಗಿ ಬರುವ ಶ್ರಮ ತೆಗೆದುಕೊಳ್ಳಬೇಡಿ.

ಎಲ್ಲರೂ ವಚ್ರ್ಯವಲ್ ಸಭೆಯ ಮೂಲಕವೇ ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಹಂಚಿಕೊಳ್ಳಿ ಎಂದು ವಿಶ್ವಸಂಸ್ಥೆ ಮನವಿ ಮಾಡಿದೆ. ಒಂದು ವೇಳೆ ಮಹತ್ವದ ಚರ್ಚೆ ಮಾಡಬೇಕು, ಕೆಲವು ಸ್ಪಷ್ಟನೆಗಳನ್ನು ಪಡೆದುಕೊಳ್ಳಬೇಕು ಎಂಬ ಉದ್ದೇಶವಿದ್ದರೆ ಪೂರ್ವ ಮಾಹಿತಿ ನೀಡಿ ಅತಿಕಡಿಮೆ ಸಂಖ್ಯೆಯ ಜನರು ಮಾತ್ರ ಆಗಮಿಸಿ ಎಂದು ಮನವಿ ಮಾಡಲಾಗಿದೆ.

ಈ ಮೊದಲು ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್, ಪ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾರ್ಕೋನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಇಸ್ರೆಲ್‍ನ ನಫ್ತಾಲಿ ಬೆನೆಟ್ಟೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿ 26 ಮಂದಿಗೆ ಆಹ್ವಾನ ನೀಡಲಾಗಿತ್ತು. ಉಳಿದಂತೆ ರಷ್ಯಾದ ವಿದೇಶಾಂಗ ಸಚಿವ, ಚೀನಾದ ಉಪ ಪ್ರಧಾನಿ, ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರುಗಳ ಭಾಷಣವನ್ನು ಮುದ್ರಣ ಮಾಡಿ ಪ್ರಸಾರ ಮಾಡುವ ನಿರ್ಧಾರವಾಗಿತ್ತು. ಈಗ ಆಫ್ಘಾನಿಸ್ತಾನ ತಾಲಿಬಾನಿಗಳ ಹಿಡಿತದಲ್ಲಿರುವುದರಿಂದ ಮತ್ತೆ ಬದಲಾವಣೆಗಳಾಗಲಿವೆ.

ಇದನ್ನು ಓದಿ : https://cnewstv.in/?p=5480

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*