Breaking News

ಹೈಟಿ ಭೂಕಂಪ : 300ರ ಗಡಿ ದಾಟಿದ ಸಾವಿನ ಸಂಖ್ಯೆ

Cnewstv.in / 16.08.2021/ ಹೈಟಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಹೈಟಿ : ಕೆರಿಬಿಯನ್ ದ್ವೀಪ ರಾಷ್ಟ್ರ ಹೈಟಿಯಲ್ಲಿ ಭೂಕಂಪ ಸಂಭವಿಸಿದೆ, ಪರಿಣಾಮವಾಗಿ ಮುನ್ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.2 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.

ಭೂಕಂಪದ ದುರಂತದಲ್ಲಿ ಒಟ್ಟು 304 ಮಂದಿ ಮೃತಪಟ್ಟಿದ್ದು, 1800 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅನೇಕ ಜನರು ಬಹುಮಹಡಿಯ ಕಟ್ಟಡಗಳಲ್ಲಿ ವಾಸವಾಗಿದ್ದು, ಬಹಳಷ್ಟು ಮಂದಿ ಅವಶೇಷಗಳಡಿ ಸಿಲುಕಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾವಿರಾರು ಕಟ್ಟಡಗಳು, ಮನೆಗಳು, ಶಾಲೆಗಳು, ಆಸ್ಪತ್ರೆಗಳು, ನೆಲಕ್ಕುರುಳಿದೆ. ರೋಗಿಗಳು, ವಿದ್ಯಾರ್ಥಿಗಳು, ವೈದ್ಯರು ಇದ್ದಂತಹ ಆಸ್ಪತ್ರೆಯ ಕಟ್ಟಡವು ಸಹ ನೆಲಕ್ಕುರುಳಿದೆ. 2010 ರಲ್ಲಿ ಸಂಭವಿಸಿದ ಹೈಟಿ ಭೂಕಂಪದಲ್ಲಿ 2.20 ಲಕ್ಷ ಮಂದಿ ಸಾವನ್ನಪ್ಪಿದ್ದರು. ರಿಕ್ಟರ್ ಮಾಪಕದಲ್ಲಿ ಸುಮಾರು 7.0 ಭೂಕಂಪದ ತೀವ್ರತೆ ಯಾಗಿತ್ತು.

ಇದನ್ನು ಒದಿ : https://cnewstv.in/?p=5426

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*