Cnewstv.in / 14.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನವದೆಹಲಿ : ಪ್ಲಾಸ್ಟಿಕ್ ಲೋಟ, ತಟ್ಟೆ ಇತ್ಯಾದಿ ಒಮ್ಮೆ ಉಪಯೋಗಿಸಿ ಎಸೆಯುವಂತೆ ಪ್ಲಾಸ್ಟಿಕ್ ವಸ್ತುಗಳ ಆಮದು, ಸಂಗ್ರಹ, ತಯಾರಿಕೆ, ಮಾರಟ ಮತ್ತು ಬಳಕೆಯನ್ನು 2022ರ ಜುಲೈ 1 ರಿಂದ ನಿಷೇಧಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಅಲ್ಲದೆ ಪ್ಲಾಸ್ಟಿಕ್ ಚೀಲಗಳ ದಪ್ಪವನ್ನು 50 ಮೈಕ್ರಾನ್ ಗಳಿಂದ 120 ಮೈಕ್ರಾನ್ ಗೆ ಏರಿಸಲು ನಿರ್ಧರಿಸಲಾಗಿದೆ.
ಎರಡು ಹಂತಗಳಲ್ಲಿ ಈ ನಿಯಮ ಜಾರಿಗೊಳ್ಳಲಿದೆ. ಮೊದಲನೆಯ ಹಂತದಲ್ಲಿ 75 ಮೈಕ್ರಾನ್ ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಚೀಲಗಳನ್ನು ಸೆಪ್ಟೆಂಬರ್ 30ರ ಬಳಿಕ ನಿಷೇಧಿಸಲಾಗುವುದು. 120 ಮೈಕ್ರಾನ್ ಗಿಂತ ಕಡಿಮೆ ದಪ್ಪದ ಬ್ಯಾಗುಗಳನ್ನ ಡಿಸೆಂಬರ್ 31ರ ನಂತರ ಸಂಪೂರ್ಣ ನಿಷೇಧಿಸಲಾಗುವುದು.
ಪ್ಲಾಸ್ಟಿಕ್ ತಟ್ಟೆ,ಲೋಟ, ಸ್ಟ್ರಾ, ಚಮಚ, ಆಮಂತ್ರಣ ಪತ್ರ, 100 ಮೈಕ್ರಾನ್ ಗಳಿಗಿಂತಲೂ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್ ಗಳು ಇತ್ಯಾದಿ ವಸ್ತುಗಳು ನಿಷೇಧವಾಗಲಿ.
ಇದನ್ನು ಒದಿ : https://cnewstv.in/?p=5395
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv