Breaking News

“ಮನಾಲಿ” ಟ್ವಿಟರಿನಲ್ಲಿ ಟ್ರೆಂಡಿಂಗ್

Cnewstv.in / 05.07.2021 / ಮನಾಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಮನಾಲಿ : ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ವೈರಲ್ ಆಗ್ತಾ ಇರೋದು ಮನಾಲಿ ಫೋಟೋಗಳು. ಏಕೆಂದರೆ ಕೊರೊನಾ ಎರಡನೇ ಅಲೆ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಜನರು ಮೈಮರೆತು ಪ್ರವಾಸಿ ತಾಣವಾಗಿರುವ ಮನಾಲಿಯಲ್ಲಿ ಕಿಕ್ಕಿರಿದು ಸೇರಿದ್ದಾರೆ.

ಸರ್ಕಾರ ಲಾಕ್ ಡೌನ್ ನಿಯಮಗಳನ್ನು ಈಗ ತಾನೇ ಸಡಿಲಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಜನ ಪ್ರವಾಸಿಗರು ಮನಾಲಿಗೆ ಆಗಮಿಸಿದ್ದಾರೆ. ಮನಾಲಿಯ ಮುಖ್ಯ ರಸ್ತೆಗಳು ಜನರಿಂದ ತುಂಬಿದ. ಹೋಟೆಲ್ ಗಳು ರೆಸ್ಟೋರೆಂಟ್ ಗಳಲ್ಲಿ “ಹೌಸ್ ಫುಲ್” ಎಂಬ ಫಲಕವನ್ನು ಹಾಕಲಾಗಿದೆ. ಜನ ಹೀಗೆ ಜವಾಬ್ದಾರಿಯನ್ನು ಮರೆತು ಗುಂಪುಗುಂಪಾಗಿ ಸೇರಿರುವುದನ್ನು ಅನೇಕ ನೆಟ್ಟಿಗರು ಖಂಡಿಸಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*