Joe Biden
ವಾಷಿಂಗ್ಟನ್: ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಚುನಾವಣೆ ಫಲಿತಾಂಶ ಕೊನೆಗೂ ಹೊರಬಿದ್ದಿದ್ದು ಜೋ ಬಿಡೆನ್ ಅಮೆರಿಕದ 46 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮ್ಯಾಜಿಕ್ ನಂಬರ್‌ಗಿಂತ 14 ಮತ ಹೆಚ್ಚು ಪಡೆಯುವ ಮೂಲಕ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ದಾಖಲಾರ್ಹ ಜಯ ಪಡೆದಿದ್ದಾರೆ. ಜೋ ಬಿಡೆನ್ ಒಟ್ಟು 284 ಮತ ಗಳಿಸಿದ್ದಾರೆ. ಡೊನಾಲ್ಡ್ ಟ್ರಂಪ್ 214 ಮತ ಪಡೆದುಕೊಂಡಿದ್ದಾರೆ.
ಎರಡನೇ ಬಾರಿ ಅಧ್ಯಕ್ಷ ಪದವಿ ಅಲಂಕರಿಸುವ ಡೊನಾಲ್ಡ್ ಟ್ರಂಪ್ ಅಧ್ಯಕ್ಷನಾಗುವ ಕನಸು ಭಗ್ನಗೊಂಡಿದೆ. ಜೋ ಬಿಡೆನ್ ಒಟ್ಟು 49.5ರಷ್ಟು ಮತ ಪಡೆದಿದ್ದರೆ, ಡೊನಾಲ್ಡ್ ಟ್ರಂಪ್ ಶೇಕಡ 48.9ರಷ್ಟು ಮತ ಪಡೆದಿದ್ದಾರೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಲಿದ್ದಾರೆ. ಇದುವರೆಗೆ ಶೇಕಡ 97 ರಷ್ಟು ಮತ ಎಣಿಕೆ ಬಹುತೇಕ ಪೂರ್ಣಗೊಂಡಿದೆ.
Recent Comments