ಅಸಾಮಾನ್ಯ ಸಾಧಕರು, ಸಿನಿಮಾ ಕಲಾವಿದರು, ಸಮಾಜ ಸೇವಕರನ್ನು ಗುರುತಿಸಿ ಅವರ ಸಾಧನೆಯ ಹಾದಿಯಲ್ಲಿ ಪರಿಚಯ ಮಾಡುವ ಕಿರುತೆರೆಯ ಸೂಪರ್ ಹಿಟ್ ಕಾರ್ಯಕ್ರಮ ‘ವೀಕೆಂಡ್ ವಿತ್ ರಮೇಶ್’ ಮತ್ತೆ ಬರ್ತಿದೆ. ಯಶಸ್ವಿಯಾಗಿ 3 ಸೀಸನ್ ಮುಗಿಸಿದ ರಮೇಶ್ ಅರವಿಂದ್ ಈಗ 4 ನೇ ಸೀಸನ್ ನೊಂದಿಗೆ ಪ್ರತ್ಯಕ್ಷವಾಗುತ್ತಿದ್ದಾರೆ..

ವೀಕೆಂಡ್ ವಿತ್ ರಮೇಶ್ ಸೀಸನ್ 4ರ ಮೊದಲ ಸಂಚಿಕೆಯಲ್ಲೇ ವಿಶೇಷ ವ್ಯಕ್ತಿಯನ್ನ ಅತಿಥಿಯಾಗಿ ಕರೆತಂದಿದ್ದಾರೆ. ಇವರನ್ನ ವೀಕೆಂಡ್ ವಿತ್ ರಮೇಶ್ ಶೋಗೆ ಆಹ್ವಾನಿಸಿ ಎಂದು ಸ್ವತಃ ಪ್ರೇಕ್ಷಕರು ಕೂಡ ಒತ್ತಾಯಿಸಿದ್ದರು. ಅವರೇ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ. ಈಗಾಗಲೇ ವೀರೇಂದ್ರ ಹೆಗ್ಗಡೆ ಅವರ ಸಂಚಿಕೆ ಶೂಟಿಂಗ್ ಮುಗಿದಿದ್ದು, ಪ್ರಸಾರಕ್ಕೆ ಸಜ್ಜಾಗಿದೆಯಂತೆ ಎನ್ನಲಾಗುತ್ತಿದೆ.
C News TV Kannada News Online in cnewstv