Breaking News

ಇರಾನ್ ನಲ್ಲಿ ಸೇನಾ ವಿಮಾನ ಪತನ; 15 ಮಂದಿ ಸಾವು

 

ಬೋಯಿಂಗ್ 707 ಸೇನಾ ಸರಕು ವಿಮಾನವು ಸೋಮವಾರ ಹವಾಮಾನ ವೈಪರೀತ್ಯದಿಂದ ಇರಾನ್ ರಾಜಧಾನಿಯಲ್ಲಿ ಅಪಘಾತಕ್ಕೆ ಈಡಾಗಿ, ವಿಮಾನದಲ್ಲಿ ಇದ್ದ 16ರಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸೇನೆ ಹೇಳಿದೆ. ವಿಮಾನದ ಎಂಜಿನಿಯರ್ ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..ಕೇಂದ್ರ ಇರಾನ್ ನ ಅಲ್ಬ್ರೋಜ್ ನ ಕರಜ್ ಬಳಿಯ ಫತ್ ವಿಮಾನ ನಿಲ್ದಾಣದ ಬಳಿಯಲ್ಲಿ ಘಟನೆ ಸಂಭವಿಸಿದೆ. ಬೋಯಿಂಗ್ 707 ವಿಮಾನವು ಕೈರ್ಗಿಸ್ತಾನದ ಬಿಶ್ಕೆಕ್ ನಿಂದ ಮಾಂಸ ಹೊತ್ತೊಯ್ಯಲಾಗುತ್ತಿತ್ತು. ಫತ್ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಭೂಸ್ಪರ್ಶ ಆಗಿದೆ. ವಿಮಾನ ಎಂಜಿನಿಯರ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..ನೆಲಕ್ಕೆ ಇಳಿಯುವಾಗ ರನ್ ವೇ ಮೇಲೆ ಸಾಗುತ್ತಾ ಬೆಂಕಿ ಹೊತ್ತಿಕೊಂಡಿತು. ಆ ನಂತರ ರನ್ ವೇಯ ಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ಸೇನೆ ಹೇಳಿದೆ. ವಿಮಾನವು ಯಾರಿಗೆ ಸೇರಿದ್ದು ಎಂಬ ಗೊಂದಲ ಇತ್ತು. ಆ ನಂತರ ಸೇನೆಯಿಂದ ಹೇಳಿಕೆ ಬಂದಿದೆ. ಈ ವಿಮಾನವು ಕೈರ್ಗಿಸ್ತಾನಕ್ಕೆ ಸೇರಿದ್ದು ಎಂದು ಅವರು ಹೇಳಿದರೆ, ಕೈರ್ಗಿಸ್ತಾನದ ಮನಸ್ ವಿಮಾನ ನಿಲ್ದಾಣದ ವಕ್ತಾರೆ ಮಾತನಾಡಿ, ವಿಮಾನವು ಇರಾನ್ ನ ಪಯಂ ಏರ್ ಗೆ ಸೇರಿದ್ದು ಎಂದಿದ್ದಾರೆ..

Leave a Reply

Your email address will not be published. Required fields are marked *

*