ವಾಷಿಂಗ್ಟನ್ : ಇತರ ರಾಷ್ಟ್ರಗಳು ಒಪ್ಪಂದಗಳಿಗೆ ಬದ್ದವಾಗದಿದ್ದರೆ ನಾವೂ ಕೂಡ ಅಣ್ವಸ್ತ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರ ಎಚ್ಚರಿಕೆ ನೀಡುವ ಮೂಲಕ ಹೊಸ ಆತಂಕ ಸೃಷ್ಟಿಸಿದ್ದಾರೆ. ರಷ್ಯಾದೊಂದಿಗೆ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದದಿಂದ ಅಮೆರಿಕ ಹಿಂದಕ್ಕೆ ಸರಿಯಲಿದೆ ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಟ್ರಂಪ್ ನೀಡಿರುವ ಈ ಹೇಳಿಕೆ ಅನೇಕ ದೇಶಗಳಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಎಲ್ಲ ದೇಶಗಳು ಅಣ್ವಸ್ತ್ರ ಒಪ್ಪಂದಕ್ಕೆ (ಮಾರಕ ಪರಮಾಣು ಅಸ್ತ್ರಗಳ ಸಂಖ್ಯೆಯನ್ನು ಮಿತಿಗೊಳಿಸುವ ಒಡಂಬಡಿಕೆ) ಬದ್ಧವಾಗಿರಬೇಕು. ಇಲ್ಲದಿದ್ದರೆ ನಾವೂ ಕೂಡ ಅಣ್ವಸ್ತ್ರ ಸಂಗ್ರಹಾಗಾರವನ್ನು ಹೆಚ್ಚಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷರು ವಿಶೇಷ ಸಂದರ್ಶನವೊಂದರಲ್ಲಿ ಗುಡುಗಿದ್ದಾರೆ. 1987ರಲ್ಲಿ ಅಂದರೆ ಅಂತರ್ಯುದ್ಧದ ವೇಳೆ ರಷ್ಯಾದೊಂಧಿಗೆ ಈ ಒಪ್ಪಂದ ಏರ್ಪಟ್ಟಿತ್ತು. ಇದು ಅಮೆರಿಕ ಹಾಗೂ ಯೂರೋಪ್ ಖಂಡದ ಮತ್ತು ದೂರ ಪ್ರಾಚ್ಯದ ಮಿತ್ರರಾಷ್ಟ್ರಗಳಲ್ಲಿ ಭದ್ರತೆ ಮತ್ತು ಸುರಕ್ಷತೆಗೆ ಸಹಕಾರಿಯಾಗಿತ್ತು. ಆದರೆ, ರಷ್ಯಾ ಮತ್ತು ಮೆಕ್ಸಿಕೋದ ವರ್ತನೆಯಿಂದ ರೋಸಿ ಹೋಗಿರುವ ಟ್ರಂಪ್ ಒಪ್ಪಂದವನ್ನು ಹಿಂದಕ್ಕೆ ಪಡೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದತ್ತ ವಲಸೆ ಬರುತ್ತಿರುವ ಮಧ್ಯಪ್ರಾಚ್ಯದ ಮಂದಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಟ್ರಂಪ್ ಇದರಲ್ಲಿ ಕುಖ್ಯಾತ ಕ್ರಿಮಿನಲ್ ಗ್ಯಾಂಗ್‍ಗಳಿವೆ ಎಂದು ಆರೋಪಿಸಿದ್ದಾರೆ. ಟರ್ಕಿಯ ಇಸ್ತಾನ್‍ಬುಲ್‍ನ ರಾಯಭಾರಿ ಕಚೇರಿಯಲ್ಲಿ ಸೌದಿ ಅರೇಬಿಯಾ ಅಧಿಕಾರಿಗಳಿಂದ ಹತ್ಯೆಗೀಡಾದರೆನ್ನಲಾದ ವಾಷಿಂಗ್ಟನ್ ಪೆÇೀಸ್ಟ್ ಅಂಕಣಕಾರ ಜಮಾಲ್ ಖುಶೋಗ್ಗಿ ಸಾವಿನ ಬಗ್ಗೆ ಸೌದಿ ನಡೆಸುತ್ತಿರುವ ತನಿಖೆ ತಮಗೆ ಸಮಾಧಾನ ನೀಡಿಲ್ಲ ಎಂದು ಅಮೆರಿಕ ಅಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ.
ಕೃಪೆ: ಸಂಗ್ರಹ
Recent Comments