Breaking News

ಹನುಮಂತನನ್ನೇ ಮುಟ್ಟಿಕೊಂಡಿರುವ ರಾವಣ ಸಿದ್ದರಾಮಯ್ಯ…!! ಇದು ಕಾಂಗ್ರೆಸ್ ಸರ್ಕಾರದ ಅಧಃ ಪತನಕ್ಕೆ ನಾಂದಿ…

Cnewstv / 29.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಹನುಮಂತನನ್ನೇ ಮುಟ್ಟಿಕೊಂಡಿರುವ ರಾವಣ ಸಿದ್ದರಾಮಯ್ಯ…!!

ಇದು ಕಾಂಗ್ರೆಸ್ ಸರ್ಕಾರದ ಅಧಃ ಪತನಕ್ಕೆ ನಾಂದಿ…

ಶಿವಮೊಗ್ಗ : ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ವಿಚಾರ ಸಂಬಂಧಿಸಿದಂತೆ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿಕೆ ನೀಡಿದ್ದು, ಸೀತೆಯನ್ನು ಮುಟ್ಟಲು ರಾವಣ ಯತ್ನಿಸಿದ ಕಾರಣಕ್ಕೆ ಲಂಕಾವೇ ನಾಶ ಆಯಿತು.

ಹೀಗಿರುವಾಗ ಹನುಮನನ್ನು ಮುಟ್ಟಿಕೊಂಡ ರಾವಣ ಸಿದ್ದರಾಮಯ್ಯನ ಅದೇ ರೀತಿ ಆಗಲಿದೆ‌. ಹನುಮನನ್ನು ಎದುರು ಹಾಕಿಕೊಂಡ ರಾವಣ ನಾಶವಾದ. ಈ ದೇಶದಲ್ಲಿ ಯಾರು ಬದುಕಲು ಸಾಧ್ಯವಿಲ್ಲ. ಅವರು ಸಹ ರಾವಣ ರೀತಿಯಲ್ಲೇ ನಾಶವಾಗುವುದು ಗ್ಯಾರಂಟಿ..

ಕೇಡುಗಾಲಕ್ಕೆ ವಿಪರೀತ ಬುದ್ಧಿ ಎಂಬಂತೆ ಕಾಂಗ್ರೆಸ್ಸಿಗರು ನಡೆದುಕೊಳ್ಳುತ್ತಿದ್ದಾರೆ. ಹನುಮ ಧ್ವಜ ತೆರವು ಗೊಳಿಸಿದ್ದು ಸರಿಯಲ್ಲ. ಯಾರು ಆ ರೀತಿ ಮಾಡಿದ್ದಾರೆ ರಾಮನ ಅವಕೃಪೆಗೆ ಪಾತ್ರರಾಗುತ್ತಾರೆ..ಹನುಮಂತನಿಗೆ ಜಾಗ ಕೊಡದ ರೀತಿಯಲ್ಲಿ ನೀವು ನಡೆದುಕೊಳ್ಳುತ್ತಿದ್ದೀರಿ..ಇದು ಕಾಂಗ್ರೆಸ್ ಸರ್ಕಾರದ ಅಧಃ ಪತನಕ್ಕೆ ನಾಂದಿ ಎಂದರು..

ಧ್ವಜ ಹಾರಿಸಿದ ಜಾಗ ಅವರಪ್ಪನ ಮನೆಯದಲ್ಲ.ಅದು ಸರ್ಕಾರಿ ಜಾಗ ತಾನೇ.?? ಸರ್ಕಾರಿ ಜಾಗದಲ್ಲಿ ಯಾವ್ಯಾವ ಧ್ವಜ ಇದೆ ಎಂಬುದು ಗೊತ್ತಿಲ್ವಾ.? ಆ ಎಲ್ಲಾ ಧ್ವಜಗಳನ್ನು ತೆಗೆದಿದ್ದಾರೇ ಅವರಿಗೆ ತಾಕತ್ತಿಲ್ಲವೇ..? ನಿಮಗೆ ಜನಪರ ಆಡಳಿತ ನೀಡುವ ತಾಕತ್ತಿಲ್ಲ..ಹಾಗಾಗಿ ಇಂತಹ ಕಿಥಮೆ ಮಾಡುತ್ತಿದ್ದಾರೆ..ಇಂತಹ ಕಿತಮೆಗೆ ರಾಜ್ಯದ ಜನ ಬಲಿಯಾಗುವುದಿಲ್ಲ ಎಂದರು.

 

#hanumanflag #Hanumanflag #Sidarammay #Congress #Bjpshivamogga #Shivamogga #Bjp #Hanuma #Stategovernment

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ..

ಚರಂಡಿ ಸ್ಯ್ಲಾಬ್ ಕುಸಿದು, ಮೃತಪಟ್ಟ ವ್ಯಕ್ತಿ..

Leave a Reply

Your email address will not be published. Required fields are marked *

*