Cnewstv / 14.07.2023 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮುಂಗಾರು ಮಳೆ ಮುನ್ನೆಚ್ಚರಿಕೆ ವ್ಯವಸ್ಥೆ ಕಳಪೆ..
ಹೊಸದಿಲ್ಲಿ: ಮುಂಗಾರು ಮಳೆಯ ಪರಿಣಾಮ ದೇಶದ ಹಲವು ರಾಜ್ಯಗಳಲ್ಲಿ ಜಲಪ್ರವಾಹ ಕಾಣಿಸಿಕೊಂಡಿದೆ. ಉತ್ತರಭಾರತಕ್ಕೆ ಮಳೆಯ ಹೊಡೆತ ತೀವ್ರವಾಗಿ ಬಾಧಿಸಿದೆ. ರಾಷ್ಟ್ರ ರಾಜಧಾನಿ ದೆಹಲಿ, ಹಿಮಾಚಲಪ್ರದೇಶ, ಉತ್ತರಾಖಂಡ, ಹರಿಯಾಣ, ಪಂಜಾಬ್ ರಾಜ್ಯಗಳಲ್ಲಿ ಗರಿಷ್ಠ ಹಾನಿಯಾಗಿದೆ. ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ನೀರಿನ ಹರಿವು ಇನ್ನೂ ಕಡಿಮೆಯಾಗಿಲ್ಲ.
ಗಮನಾರ್ಹ ಸಂಗತಿಯೆಂದರೆ ದೇಶದ ಶೇ.72 ಜಿಲ್ಲೆಗಳು ಪ್ರವಾಹಕ್ಕೆ ಮುಖಾಮುಖೀಯಾಗುವ ಅಪಾಯ ಹೊಂದಿವೆ. ಆದರೆ ಈ ಪೈಕಿ ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ನೀಡುವ ಕೇಂದ್ರಗಳನ್ನು ಹೊಂದಿರುವ ಜಿಲ್ಲೆಗಳ ಪ್ರಮಾಣ ಶೇ.25 ಮಾತ್ರ. ಹಿಂದೆಯೂ ಪ್ರವಾಹವನ್ನೆದುರಿಸಿ ಅನುಭವವಿರುವ ಕರ್ನಾಟಕದಲ್ಲೂ ಇಂತಹ ಮುನ್ನೆಚ್ಚರಿಕೆ ವ್ಯವಸ್ಥೆಯಿಲ್ಲ ಎಂದು ಸಿಇಇಡಬ್ಲ್ಯು (ಕೌನ್ಸಿಲ್ ಆನ್ ಎನರ್ಜಿ ಎನ್ವಿರಾನ್‌ಮೆಂಟ್ ಆ್ಯಂಡ್ ವಾಟರ್) ತನ್ನ ವರದಿಯಲ್ಲಿ ಹೇಳಿದೆ. ಜನಸಂಖ್ಯೆಯ ಆಧಾರದಲ್ಲೇ ಹೇಳುವುದಾದರೆ ಭಾರತದ ಶೇ.66 ಮಂದಿ ಪ್ರವಾಹದ ವೇಳೆ ಮುನ್ನೆಚ್ಚರಿಕೆ ಪಡೆಯುವ ಸ್ಥಿತಿಯಲ್ಲಿಲ್ಲ, ಬರೀ ಶೇ.33 ಮಂದಿಗೆ ಇಂತಹದ್ದೊಂದು ಸೌಲಭ್ಯವಿದೆ.
ದೇಶದ ಉತ್ತರದ ರಾಜ್ಯಗಳಲ್ಲಿ ವಿಪರೀತ ಮಳೆ ಸುರಿಯುತ್ತಿದ್ದರೂ, ಕರ್ನಾಟಕದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಕರ್ನಾಟಕದ ಕೆಲವು ಭಾಗಗಳಲ್ಲಿ ಚೆನ್ನಾಗಿಯೇ ಮಳೆಯಾಗಿದೆ. ಒಟ್ಟಾರೆ ರಾಜ್ಯವನ್ನು ನೋಡಿದರೆ, ಕೊರತೆಯೇ ಇದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಗಾಗಿ ಜನ ಇನ್ನೂ ಕಾಯುತ್ತಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv