ಪದ್ಮಾವತ್’ ಚಿತ್ರದ ನಂತರ ದೀಪಿಕಾ ಪಡುಕೋಣೆ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಶಾರೂಖ್ ಖಾನ್ ಅವರ ‘ಜೀರೋ’ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿರುವುದು ಬಿಟ್ಟರೇ ನಾಯಕಿಯಾಗಿ ಯಾವ ಸಿನಿಮಾನೂ ಆರಂಭಿಸಿಲ್ಲ. ಇದೀಗ ವಿಭಿನ್ನ, ವಿಶೇಷ ಮತ್ತು ಸವಾಲಿನ ಪಾತ್ರವೊಂದನ್ನ ನಿರ್ವಹಿಸಲು ಬಾಲಿವುಡ್ ಬ್ಯೂಟಿ ದೀಪಿಕಾ ಸಿದ್ಧವಾಗಿದ್ದಾರೆ. ಹೌದು, ಆಸಿಡ್ ದಾಳಿಗೆ ಒಳಗಾಗಿದ್ದ ಹುಡುಗಿ ಪಾತ್ರದಲ್ಲಿ ದೀಪಿಕಾ ಬಣ್ಣ ಹಚ್ಚಲಿದ್ದಾರೆ. ನೈಜ ಘಟನೆಯಾಧರಿತ ಚಿತ್ರದಲ್ಲಿ ನಾಯಕಿಯಾಗಿರುವ ದೀಪಿಕಾ ಆಸಿಡ್ ದಾಳಿಗೆ ಒಳಗಾಗಿ ಸಾಧಿಸಿದ ಹುಡುಗಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.
ವಿಶೇಷ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ
C News TV Kannada News Online in cnewstv