Breaking News

ನಯಾಗರ ಜಲಪಾತದಲ್ಲಿ ದೀಪಾವಳಿಯ ಸಂಭ್ರಮ

ಅಮೆರಿಕ ಸಂಯುಕ್ತ ಸಂಸ್ಥಾನ, ಮತ್ತು ಕೆನಡಾ ದೇಶಗಳ ಅತಿದೊಡ್ಡ ಮತ್ತು ಅತ್ಯಂತ ಸುಂದರ ಜಲಪಾತ. ಈ ಜಲಪಾತ ಎರಡು ದೇಶಗಳಲ್ಲಿ ಹರಡಿಕೊಂಡಿದೆ. ಜಲಪಾತದ ಒಂದು ಭಾಗದಲ್ಲಿ ಅಮೆರಿಕ ಇನ್ನೊಂದು ತುದಿಯಲ್ಲಿ ಕೆನಡ. ಇವೆರಡರ ಮಧ್ಯೆ ನಯಾಗರ ನದಿ ಹರಿಯುತ್ತದೆ. ಅಮೆರಿಕದ ಈರಿ ಸರೋವರ ಮತ್ತು ಕೆನಡದ ಒಂಟಾರಿಯೋ ಸರೋವರಗಳ ಮಧ್ಯೆ ಇರುವ ಸಣ್ಣ ನಯಾಗರ ನದಿ, ಈ ಅದ್ಭುತ ಜಲಪಾತ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ದೀಪಾವಳಿಯ ಬೆಳಕಿನ ಹಬ್ಬಕ್ಕೆ ನಯಾಗರ ಸಾಕ್ಷಿಯಾಗಲಿದೆ.

ದೀಪಾವಳಿಗೆ ಪಟಾಕಿ ಹೊಡೆಯಬೇಕಿಲ್ಲ, ಸಿಹಿ ಹಂಚಿದರೂ ಸಾಕು: ಸುಪ್ರೀಂಕೋರ್ಟ್ ನಯಾಗರ ಪಾರ್ಕ್ಸ್ ಕಮಿಷನ್ನ ಸಹಕಾರದೊಂದಿಗೆ ಇಂಡೋ-ಕೆನಡಿಯನ್ ಕಲಾ ಸಮಿತಿ (ಐಸಿಎಸಿ) ಎಂಬ ಲಾಭರಹಿತ ಸಂಸ್ಥೆ ಜಾಗತಿಕ ಪ್ರವಾಸಿ ತಾಣವಾದ ನಯಾಗರದಲ್ಲಿ ದೀಪಾವಳಿ ಆಚರಿಸಲಿದೆ. ಅಂದು ನಯಾಗಾರದಲ್ಲಿ ದೀಪಾವಳಿಯ ಬೆಳಕು, ಪಟಾಕಿ ಉತ್ಸವಗಳು ನಡೆಯಲಿವೆ. ನಯಾಗರದಲ್ಲಿ ಅ.14ರಂದು ದೀಪಾವಳಿ ಆಚರಿಸುತ್ತಿದ್ದರೆ, ಮಿಸ್ಸಿಸ್ಸೌಗಾದಲ್ಲಿ ಅ.12 ಮತ್ತು 13ರಂದು ದೀಪಾವಳಿ ರಾಜ್ಮತಾಜ್ ಕಾರ್ಯಕ್ರಮ ನಡೆಯಲಿದೆ. ಭಾರತದಲ್ಲಿ ದೀಪಾವಳಿ ನವೆಂಬರ್ 7ರಂದು ಇದ್ದರೂ, ಕೆನಡಾದಲ್ಲಿ ಅಕ್ಟೋಬರ್ 14ರಂದೇ ಆಚರಿಸಲಾಗುತ್ತಿದೆ. ನವೆಂಬರ್ ತಿಂಗಳಿನಲ್ಲಿ ಹೊರಾಂಗಣ ಕಾರ್ಯಕ್ರಮಕ್ಕೆ ಪೂರಕವಾದ ವಾತಾವರಣ ಇರುವುದಿಲ್ಲ. ವಿಪರೀತ ಚಳಿ ಇರುವುದರಿಂದ ಕಾರ್ಯಕ್ರಮ ಆಯೋಜನೆ ಕಷ್ಟವಾಗುತ್ತದೆ , ಹಾಗಗಿ ಆಚರಣೆಯನ್ನು ಬೇಗನೆ ಮಾಡುತ್ತಿರುವುದಾಗಿ ಐಸಿಎಸಿಯ ಸಂಸ್ಥಾಪಕ ನಿರ್ದೇಶಕ ಅಜಯ್ ಮೋದಿ ತಿಳಿಸಿದ್ದಾರೆ. ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಸುಮಾರು 50 ಸಾವಿರ ಮಂದಿ ಇದರಲ್ಲಿ ಭಾಗವಹಿಸಿದ್ದಾರೆ.

Leave a Reply

Your email address will not be published. Required fields are marked *

*