Cnewstv / 16.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಏಕರೂಪ ವೇಳಾಪಟ್ಟಿ ಜಾರಿಗೋಳಿಸಿ : ABVP
ಶಿವಮೊಗ್ಗ : ಏಕರೂಪ ವೇಳಾಪಟ್ಟಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಶೈಕ್ಷಣಿಕ ವೇಳಾಪಟ್ಟಿಯ ಸ್ಪಷ್ಟ ನೀತಿ ಇಲ್ಲದ ಕಾರಣದಿಂದ ಪರದಾಡುತ್ತಿರುವ ವಿದ್ಯಾರ್ಥಿಗಳು 2022-23ನೇ ಸಾಲಿನ ಸ್ನಾತಕ ಪದವಿ ಪ್ರಥಮ ಸೆಮ್ ನ ವಿದ್ಯಾರ್ಥಿಗಳ ತರಗತಿಗಳು 01-09-2022 ರಂದು ಆರಂಭವಾಗಿರುತ್ತವೆ. ಆದರೆ ಆಗ 2021-22 ನೇ ಸಾಲಿನ ಪ್ರಥಮ ವರ್ಷದ ತರಗತಿಗಳು ಮತ್ತು 2&3 ನೇ ವರ್ಷದ ವಿದ್ಯಾರ್ಥಿಗಳ ತರಗತಿಗಳು ಸೆಪ್ಟೆಂಬರ್ 17ರವರೆಗೆ ನಡೆದಿದ್ದ ಕಾರಣ ಬಹುತೇಕ ಕಾಲೇಜುಗಳಲ್ಲಿ ತರಗತಿ ಕೊಠಡಿಗಳ ಕೊರತೆ ಕಾರಣಕ್ಕಾಗಿ 2022-23ನೇ ಸಾಲಿನ ಸ್ನಾತಕ ಪದವಿ ಪ್ರಥಮ ಸೆಮ್ ನ ವಿದ್ಯಾರ್ಥಿಗಳ ತರಗತಿಗಳು ಸಮರ್ಪಕವಾಗಿ ನಡೆದಿರುವುದಿಲ್ಲ. ಇದಲ್ಲದೆ ಒಂದು ಬಾರಿ 2021-22 ನೇ ಸಾಲಿನ 2&3 ನೇ ವರ್ಷದ ವಿದ್ಯಾರ್ಥಿಗಳಿಗೆ ಸಪ್ಟೆಂಬರ್ 29ರಿಂದ ಅಕ್ಟೋಬರ್ 20ರವರೆಗೂ ನಡೆದ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರಣದಿಂದಲೂ ಮತ್ತು ಇನ್ನೊಂದು ಬಾರಿ 2021-22 ನೇ ಸಾಲಿನ ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ ಅಕ್ಟೋಬರ್ 15ರಿಂದ ನವೆಂಬರ್ 18ರವರೆಗೂ ನಡೆದ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರಣದಿಂದಲೂ ಸಹ ಈ ಸಮಯದಲ್ಲಿ 2022-23ನೇ ಸಾಲಿನ ಸ್ನಾತಕ ಪದವಿ ಪ್ರಥಮ ಸೆಮ್ ನ ವಿದ್ಯಾರ್ಥಿಗಳ ತರಗತಿಗಳು ಸಮರ್ಪಕವಾಗಿ ನಡೆದಿರುವುದಿಲ್ಲ. ಆದರೆ ಕುವೆಂಪು ವಿವಿಯು ಇದನ್ನು ಪರಿಗಣಿಸದೆ 2022-23ನೇ ಸಾಲಿನ ಸ್ನಾತಕ ಪದವಿ ಪ್ರಥಮ ಸೆಮ್ ನ ವಿದ್ಯಾರ್ಥಿಗಳ ಶೈಕ್ಷಣಿಕ ಸಮ್ ಅನ್ನು 24-12-2022 ಕ್ಕೆ ಕೊನೆಯ ದಿನಾಂಕ ನಿಗದಿಪಡಿಸಿ ಮತ್ತು 04-01-2023ರಿಂದ ಲಿಖಿತ ಪರೀಕ್ಷೆಗಳನ್ನು ಆರಂಭಿಸಲು ಆದೇಶ ಹೊರಡಿಸಿತ್ತು.
ಆದರೆ ನಂತರ ಎಬಿವಿಪಿಯ ಪ್ರತಿಭಟನೆಗೆ ಮಣಿದು ಸುಮಾರು 21 ದಿನಗಳ ಕಾಲ ಶೈಕ್ಷಣಿಕ ಸೆಮ್ ಅನ್ನು ಮುಂದೂಡಿ ದಿನಾಂಕ 16-12-2022ರಂದು ಆದೇಶ ಹೊರಡಿಸಿತ್ತು. ಆದರೆ ವಿದ್ಯಾರ್ಥಿಗಳಿಗೆ ಈ 21 ದಿನಗಳ ಕಾಲ ಅವಧಿಯು ಸಾಕಾಗಿರುವುದಿಲ್ಲ ಮತ್ತು ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳ ಮತ್ತು ಕಾಲೇಜುಗಳ ಪ್ರಾಂಶುಪಾಲರು,ಉಪನ್ಯಾಸಕರ ಬೇಡಿಕೆಯಂತೆ ಎಲ್ಲಾ ವರ್ಷದ ವಿದ್ಯಾರ್ಥಿಗಳಿಗೆ ಮಂಗಳೂರು ವಿಶ್ವವಿದ್ಯಾಲಯ ಮತ್ತು ದಾವಣಗೆರೆ ವಿಶ್ವವಿದ್ಯಾಲಯದ ಮಾದರಿಯಲ್ಲಿ ಏಕರೂಪ ವೇಳಾಪಟ್ಟಿಯನ್ನು ಜಾರಿಗೊಳಿಸುವಂತೆ ABVP ಆಗ್ರಹಿಸಿತ್ತು.
ಆದರೆ ಮತ್ತೆ ಕುವೆಂಪು ವಿಶ್ವವಿದ್ಯಾಲಯವು ದಿನಾಂಕ 13-01-2023 ರಂದುಸುತ್ತೋಲೆ ಹೊರಡಿಸಿ 2022-23ನೇ ಸಾಲಿನ ಪ್ರಥಮ ವರ್ಷದ ಪ್ರಥಮ ಸೆಮ್ ನ ವಿದ್ಯಾರ್ಥಿಗಳಿಗೆ ಇದೇ ಜನವರಿ 23ಕ್ಕೆ ಸೆಮ್ ನ ಕೊನೆಯ ದಿನಾಂಕ ನಿಗದಿಪಡಿಸಿ ಮತ್ತು ಜನವರಿ 24-ಫೆಬ್ರವರಿ 28 ರ ವರೆಗೆ ಪರೀಕ್ಷೆಗಳನ್ನು ಮಾಡಲು ಮತ್ತು ಮಾರ್ಚ್ 15ರಿಂದ ಎರಡನೇ ಸೆಮ್ ನ ತರಗತಿಗಳನ್ನು ಆರಂಭಿಸಲು ಸುತ್ತೋಲೆ ಹೊರಡಿಸಿದೆ. ಆದರೆ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಎರಡನೇ ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳ ತರಗತಿಗಳು ಇರುವುದರಿಂದ ಪರೀಕ್ಷೆ ಮತ್ತು ಮೌಲ್ಯಮಾಪನಗಳ ಕಾರಣಕ್ಕಾಗಿ ಅಧ್ಯಾಪಕರು ತೊಡಗುವುದರಿಂದ ಮತ್ತು ಕೊಠಡಿಗಳ ಕೊರತೆ ಎದುರಾಗುವುದರಿಂದ ಎರಡನೇ ಮತ್ತು ಮೂರನೇ ವರ್ಷದ ವರ್ಷದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಆದರೆ ಕುವೆಂಪು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಈ ಸಮಸ್ಯೆಯ ಅರಿವಿದ್ದರೂ ಸಹ ವಿದ್ಯಾರ್ಥಿಗಳ ಏಕರೂಪ ವೇಳಾಪಟ್ಟಿಯ ಆಗ್ರಹಕ್ಕೆ ಬೆಲೆ ಕೊಡದೆ ಮತ್ತೆ ಅವೈಜ್ಞಾನಿಕವಾಗಿ ವೇಳಾಪಟ್ಟಿಯನ್ನು ರಚಿಸಿ ವಿದ್ಯಾರ್ಥಿಗಳನ್ನು ತೊಂದರೆಗೀಡಾಗುವಂತೆ ಮಾಡಿದೆ. ಆದ್ದರಿಂದ ಈ ಕೂಡಲೇ ಪ್ರಸಕ್ತ ಸುತ್ತೋಲೆಯನ್ನು ಹಿಂಪಡೆದು ವಿದ್ಯಾರ್ಥಿಗಳ ಅಪೇಕ್ಷೆ ಮೇರೆಗೆ ಮಂಗಳೂರು ಮತ್ತು ದಾವಣಗೆರೆ ವಿಶ್ವವಿದ್ಯಾಲಯಗಳ ಮಾದರಿಯಲ್ಲಿ ಏಕರೂಪ ಪರೀಕ್ಷಾ ವೇಳಾಪಟ್ಟಿಯನ್ನು ಜಾರಿಗೊಳಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುವೆಂಪು ವಿಶ್ವವಿದ್ಯಾಲಯವನ್ನು
ಆಗ್ರಹಿಸುತ್ತದೆ.
ಇದನ್ನು ಒದಿ : https://cnewstv.in/?p=11855
NEP ಬ್ಯಾಚ್ ನ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಲು ಆಗ್ರಹಿಸಿ
ಕುವೆಂಪು ವಿಶ್ವವಿದ್ಯಾಲಯವು NEP ಮೊದಲನೇ ಬ್ಯಾಚ್ ನ ವಿದ್ಯಾರ್ಥಿಗಳ ಮೊದಲ ಸೆಮ್ ನ ವಿದ್ಯಾರ್ಥಿಗಳ ವಿವಿಧ ಕೋರ್ಸಗಳ ಪರೀಕ್ಷಾ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿ ದಿನಾಂಕ 30-03-2022ರಂದು ಸುತ್ತೋಲೆ ಹೊರಡಿಸಲಾಗಿತ್ತು.ಆದರೆ ಇದನ್ನು ಖಂಡಿಸಿ ABVP ಪ್ರತಿಭಟನೆ ಮಾಡಿದ ನಂತರ ಕೇವಲ B.Com ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದಲ್ಲಿ 300ರೂ ಮಾತ್ರ ಕಡಿಮೆ ಮಾಡಲಾಗಿತ್ತು. ಆದರೆ ABVP B.Com ಸೇರಿದಂತೆ ವಿವಿಧ ಕೋರ್ಸುಗಳ ಇನ್ನಷ್ಟು ಪರೀಕ್ಷೆ ಶುಲ್ಕ ಕಡಿಮೆ ಮಾಡಲು ಆಗ್ರಹಿಸಿ ವಿವಿಧ ಬಾರಿ ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಲಾಗಿದ್ದರೂ ಕುವೆಂಪು ವಿವಿಯು ಪರೀಕ್ಷಾ ಶುಲ್ಕ ಕಡಿಮೆ ಮಾಡದೆ NEP ಮೊದಲ ಬ್ಯಾಚ್ ನ ಎರಡನೇ ಸೆಮ್ ನ B.Sc ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುತ್ತದೆ.ರಾಜ್ಯದ ಬಹುತೇಕ ಎಲ್ಲಾ ವಿವಿಗಳ NEP ಬ್ಯಾಚ್ ನ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವು ಮಾರ್ಕ್ಸ್ ಕಾರ್ಡ ಶುಲ್ಕ ಸೇರಿದಂತೆ ಬಹುತೇಕ 1000 ರೂಗಳ ಆಸುಪಾಸಿನಲ್ಲಿ ಇದೆ.ಆದರೆ ಕುವೆಂಪು ವಿವಿ ಭಾರಿ ಪ್ರಮಾಣದಲ್ಲಿ ಶುಲ್ಕ ಹೆಚ್ಚಳ ಮಾಡಿದ್ದು ಆದಷ್ಟು ಬೇಗ ಎಲ್ಲಾ ಕೋರ್ಸುಗಳ ಪರೀಕ್ಷಾ ಶುಲ್ಕವನ್ನು ಕಡಿಮೆ
ಮಾಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments