Cnewstv / 16.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಭೂಪಾಳಂ ಶರತ್ ತರಹದ ಸಾವು ಇನ್ಯಾರಿಗೂ ಆಗಬಾರದು – ಶಶಿಧರ್ ಭೂಪಾಳಂ
ಶಿವಮೊಗ್ಗ : ಜನವರಿ 8 ರಂದು ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟಂತಹ ಭೂಪಾಳಂ ಶರತ್ ಸಾವಿಗೆ ಅಗ್ನಿಶಾಮಕ ದಳದ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಶಿವಮೊಗ್ಗದ ವಿವಿಧ ಸಂಘ ಸಂಸ್ಥೆಗಳು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.
ಅಗ್ನಿ ಅವಘಡ ನಡೆದ ದಿನ ಸ್ಥಳಕಾಗಮಿಸಿದಂತಹ ಅಗ್ನಿಶಾಮಕ ದಳದ ವಾಹನದಲ್ಲಿ ಬೆಂಕಿ ನಂದಿಸಲು ಬೇಕಾದಂತಹ ಸೂಕ್ತ ಉಪಕರಣಗಳಿರಲಿಲ್ಲ. ಟಾರ್ಚ್ ಆಕ್ಸಿಜನ್ ಸಿಲೆಂಡರ್ ಮಾಸ್ಕ್ ಇರಲಿಲ್ಲ. ವಾಹನದಲ್ಲಿ ಕೇವಲ 100 ಅಡಿಗಳ ಒಂದು ಪೈಪ್ ಮಾತ್ರ ಇತ್ತು. ಮನೆಯೊಳಗೆ ಬಂದು ಬೆಂಕಿಯ ಮೂಲ ಎಲ್ಲಿದೆ ? ಯಾರು ಎಲ್ಲಿ ಸಿಲುಕಿದ್ದಾರೆ ಎನ್ನುವ ಬಗ್ಗೆ ಖಚಿತ ಮಾಹಿತಿಯನ್ನು ಕೂಡ ಪಡೆಯಲು ಪ್ರಯತ್ನಿಸಲಿಲ್ಲ. ನಾವು ಕರೆ ಮಾಡಿದ 15 ನಿಮಿಷಗಳ ನಂತರ ಮೊದಲನೇ ವಾಹನ ಬಂದಿದ್ದು ಎರಡನೇ ಅಗ್ನಿಶಾಮಕಗಳದ ವಾಹನವು 30 ನಿಮಿಷಗಳ ನಂತರ ಬಂದಿತ್ತು.
ನನ್ನ ಕುಟುಂಬಕ್ಕೆ ಆದಂತೆ ಮತ್ತೆ ಯಾರಿಗೂ ಈ ರೀತಿ ಆಗಬಾರದು, ಶರತ್ ಭೂಪಾಳಂಗೆ ಬಂದಂತಹ ಸಾವು ಇನ್ಯಾರಿಗೂ ಬರಬಾರದು ಎನ್ನುವುದು ನಮ್ಮ ಕೋರಿಕೆ.
ಶಶಿಧರ್ ಭೂಪಾಳಂ ( ಶರತ್ ಭೂಪಾಳಂ ತಂದೆ )
ಇದನ್ನು ಒದಿ : https://cnewstv.in/?p=11852
ಶರತ್ ಭೂಪಾಳಂ ಫೋಟೋ ಹಿಡಿದು ಕುವೆಂಪು ರಸ್ತೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಶರತ್ ಭೂಪಾಳಂ ಕುಟುಂಬದವರು ವಿವಿಧ ಸಂಘ-ಸಂಸ್ಥೆಯವರು ಸ್ನೇಹಿತರು ಸೇರಿದಂತೆ ನೂರಾರು ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments