ಕಿರುತೆರೆ ನಟಿ ತುನಿಶಾ ಪ್ರಕರಣ : ʼʼಲವ್ ಜಿಹಾದ್ ಕೋನದಲ್ಲೂ ತನಿಖೆ ಆಗಬೇಕು”.
Cnewstv / 25.12.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕಿರುತೆರೆ ನಟಿ ತುನಿಶಾ ಪ್ರಕರಣ : ʼʼಲವ್ ಜಿಹಾದ್ ಕೋನದಲ್ಲೂ ತನಿಖೆ ಆಗಬೇಕು”.
ಮುಂಬೈ: ಕಿರುತೆರೆ ನಟಿ ತುನಿಶಾ ಪ್ರಕರಣದ ತನಿಖೆಯನ್ನು ಲವ್ ಜಿಹಾದ್ ಕೋನದಿಂದಲೂ ತನಿಖೆ ಮಾಡಬೇಕೆಂದು ಬಿಜೆಪಿ ಶಾಸಕ ರಾಮ್ ಕದಂ ಹೇಳಿದ್ದಾರೆ.
ಜನಪ್ರಿಯ ಟಿವಿ ಧಾರಾವಾಹಿಗಳಾದ ‘ಚಕ್ರವರ್ತಿನ್ ಅಶೋಕ ಸಾಮ್ರಾಟ್ʼ, ‘ಭಾರತ್ ಕಾ ವೀರ್ ಪುತ್ರ-ಮಹಾರಾಣಾ ಪ್ರತಾಪ್’ ಮತ್ತು ‘ಅಲಿ ಬಾಬಾ ದಸ್ತಾನ್-ಇ-ಕಾಬೂಲ್’ ಮುಂತಾದ ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿನ ಪಾತ್ರಗಳಿಗೆ ಖ್ಯಾತಿ ಪಡೆದಿದ್ದ ತುನಿಶಾ ನೆನ್ನೆ ಸೆಟ್ ನಲ್ಲೇ ನೇಣಿಗೆ ಶರಣಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ನಟ ಶೀಜನ್ ಮೊಹಮ್ಮದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಶೀಜನ್ ಹಾಗೂ ಮೊಹಮ್ಮದ್ ಖಾನ್ ಹಾಗೂ ತುನಿಶಾ ಇಬ್ಬರು ಪ್ರೇಮ ಸಂಬಂಧದಲ್ಲಿದ್ದರು. ಇಬ್ಬರ ನಡುವಿನ ಸಂಬಂಧ ಕಳೆದ 15 ದಿನಗಳ ಹಿಂದಷ್ಟೇ ಮುರಿದು ಬಿದ್ದಿತ್ತು ಎಂದು ವರದಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ರವಿವಾರ ಮಾಧ್ಯಮದವರೊಂದಿಗೆ ಮಾತಾನಾಡಿದ ಬಿಜೆಪಿ ಶಾಸಕ ರಾಮ್ ಕದಂ,” ತುನಿಶಾ ಶರ್ಮಾ ಅವರ ಕುಟುಂಬಕ್ಕೆ ನ್ಯಾಯ ಸಿಗಲಿದೆ. ಪ್ರಕರಣವು ಲವ್ ಜಿಹಾದ್‌ಗೆ ಸಂಬಂಧಿಸಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಕಂಡುಹಿಡಿಯಬೇಕು. ಇದರ ಹಿಂದೆ ಯಾವುದಾದರೂ ಸಂಘಟನೆಗಳ ಕೈವಾಡ, ಪಿತೂರಿಗಳಿದ್ದರೆ ಅದನ್ನು ಕೂಡ ಬಹಿರಂಗವಾಗಬೇಕು ಎಂದು ಹೇಳಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
2022-12-25