Breaking News

ಎರಡು ಸುದ್ದಿ ವಾಹಿನಿಗಳನ್ನು ಪತ್ರಿಕಾಗೋಷ್ಠಿಯಿಂದ ನಿರ್ಬಂಧಿಸಿದ ಕೇರಳ ರಾಜ್ಯಪಾಲ.

Cnewstv / 02.11.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಎರಡು ಸುದ್ದಿ ವಾಹಿನಿಗಳನ್ನು ಪತ್ರಿಕಾಗೋಷ್ಠಿಯಿಂದ ನಿರ್ಬಂಧಿಸಿದ ಕೇರಳ ರಾಜ್ಯಪಾಲ.

ನವದೆಹಲಿ : ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸೋಮವಾರ ತಮ್ಮ ಪತ್ರಿಕಾಗೋಷ್ಠಿಗೆ ಎರಡು ಮಲೆಯಾಳಂ ಸುದ್ದಿ ವಾಹಿನಿಗಳನ್ನು ನಿರ್ಬಂಧಿಸಿದ್ದಾರೆ.

ಈ ಕುರಿತು ಮಾತನಾಡಿದ ಆರಿಫ್, “ನಾನು ಮಾಧ್ಯಮವನ್ನು ಅತ್ಯಂತ ಮುಖ್ಯವೆಂದು ಪರಿಗಣಿಸಿದ್ದೇನೆ. ಯಾವಾಗಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದೇನೆ. ಆದರೆ ಮುಖವಾಡ ಧರಿಸಿರುವ ಮಾಧ್ಯಮವನ್ನು ನಾನು ಪ್ರೋತ್ಸಾಹಿಸುವುದಿಲ್ಲ,’ ಎಂದರು.

“ಮಲಯಾಳಂ ಚಾನೆಲ್‌ಗಳಾದ ಕೈರಾಲಿ ಮತ್ತು ಮೀಡಿಯಾ ಒನ್‌ನ ವರದಿಗಾರರು ಪತ್ರಿಕಾಗೋಷ್ಠಿಯಿಂದ ಹೊರಹೋಗಬಹುದು. ಇವು ಮಾಧ್ಯಮವಲ್ಲ. ಮುಖವಾಡ ಧರಿಸಿದ ಮಾಧ್ಯಮ. ಇವು ಮೂಲತಃ ರಾಜಕೀಯ ಸಂಸ್ಥೆಗಳು. ಹೀಗಾಗಿ ನಾನು ಇವುಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ,’ ಎಂದು ಖಾರವಾಗಿ ಹೇಳಿದರು.

ಅ.24ರಂದು ಈ ಎರಡು ಚಾನೆಲ್‌ಗಲು ಸೇರಿ ಒಟ್ಟು ನಾಲ್ಕು ಮಲೆಯಾಳಂ ಚಾನೆಲ್‌ಗಲನ್ನು ಸುದ್ದಿಗೋಷ್ಠಿಗೆ ಹಾಜರಾಗದಂತೆ ಕೇರಳ ರಾಜಭವನ ನಿಷೇಧಿಸಿತ್ತು. ಕೈರಾಲಿ ನ್ಯೂಸ್ ಚಾನೆಲ್ ಮಾಲೀಕ ಸಿಪಿಎಂ ನಾಯಕರಾಗಿದ್ದಾರೆ. ಸೆಕ್ಯುರಿಟಿ ಕ್ಲಿಯರೆನ್ಸ್‌ ಸಮಸ್ಯೆ ನೇರ ಮೀಡಿಯಾ ಒನ್ ಚಾನೆಲ್ ಕೇಂದ್ರ ಸರ್ಕಾರದಿಂದ ನಿಷೇಧ ಎದುರಿಸುತ್ತಿದೆ..

ಇದನ್ನು ಒದಿ : http://ಎರಡು ಸುದ್ದಿ ವಾಹಿನಿಗಳನ್ನು ಪತ್ರಿಕಾಗೋಷ್ಠಿಯಿಂದ ನಿರ್ಬಂಧಿಸಿದ ಕೇರಳ ರಾಜ್ಯಪಾಲ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*