ಗಂಧದಗುಡಿ ಚಿತ್ರದ ಭರ್ಜರಿ ಸ್ವಾಗತಕ್ಕೆ ತಯಾರಾದ ಮಲೆನಾಡು. ಪ್ರೀಮಿಯರ್ ಶೋ ಟಿಕೆಟ್ ಸೋಲ್ಡ್ ಔಟ್.
Cnewstv.in / 27.10.2022 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಗಂಧದಗುಡಿ ಚಿತ್ರದ ಭರ್ಜರಿ ಸ್ವಾಗತಕ್ಕೆ ತಯಾರಾದ ಮಲೆನಾಡು. ಪ್ರೀಮಿಯರ್ ಶೋ ಟಿಕೆಟ್ ಸೋಲ್ಡ್ ಔಟ್.
ಶಿವಮೊಗ್ಗ : ಅಪ್ಪುವಿನ ಕೊನೆಯ ಚಿತ್ರವಾದ ಗಂಧದಗುಡಿಗೆ ಸ್ವಾಗತ ಮಾಡಲು ಮಲೆನಾಡಿನ ಅಭಿಮಾನಿಗಳು ಸಕಲ ತಯಾರಿಯನ್ನು ಮಾಡಿಕೊಂಡಿದ್ದಾರೆ. ತನ್ನ ನೆಚ್ಚಿನ ನಟನನ್ನ ಪರದೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ
ಶಿವಮೊಗ್ಗದ ವೀರಭದ್ರೇಶ್ವರ ಚಿತ್ರಮಂದಿರ ಹಾಗೂ ಭರತ್ ಸಿನಿಮಾದಲ್ಲಿ ಚಿತ್ರ ತೆರೆಕಾಣಲಿದೆ. ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಅಪ್ಪುವಿನ 34 ಅಡಿ ಎತ್ತರದ ಕಟ್ ಔಟ್ ನಿರ್ಮಾಣ ಮಾಡಲಾಗಿದೆ. ಇಂದು ಸಂಜೆ 6:15 ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿದ್ದು ಎಲ್ಲಾ ಪ್ರೀಮಿಯರ್ ಶೋ ಟಿಕೆಟ್ ಸೋಲ್ಡ್ ಔಟ್ ಆಗಿದೆ.
ಚಿತ್ರಮಂದಿರವನ್ನು ಬೆಳಗ್ಗಿನಿಂದಲೇ ಅಭಿಮಾನಿಗಳು , ಹೂವು, ಫ್ಲೆಕ್ಸ್, ಪೋಸ್ಟರ್, ಬ್ಯಾನರ್ ಗಳಿಂದ ಅಲಂಕರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮೊದಲ ದಿನದ ಎಲ್ಲಾ ಟಿಕೆಟ್ ಗಳು ಕೂಡ ಸೋಲ್ಡ್ ಔಟ್ ಆಗಿದೆ. ಎರಡು ಚಿತ್ರಮಂದಿರದಿಂದ ಮೊದಲನೇ ದಿನ ಒಟ್ಟು 14 ಶೋಗಳು ನಡೆಯಲಿದೆ.