Cnewstv.in / 07.09.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಭಾರತ್ ಜೋಡೋ ಯಾತ್ರೆಗೆ ಇಂದು ಚಾಲನೆ.
ನವದೆಹಲಿ : ಇಂದು ಭಾರತ್ ಜೋಡೋ ಯಾತ್ರೆಗೆ ಪಕ್ಷದ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಲ್ಲಿ ಚಾಲನೆ ನೀಡಲಿದ್ದಾರೆ.
ಒಟ್ಟು 119ಮಂದಿ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. 12 ರಾಜ್ಯಗಳಲ್ಲಿ ಈ ಯಾತ್ರೆ ನಡೆಯಲಿದ್ದು, ಐದು ತಿಂಗಳ ಬಳಿಕ ಸಮಾರೋಪಗೊಳ್ಳಲಿದೆ.
ಏಕರೂಪತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಎಲ್ಲರೂ ಬಿಳಿ ಬಣ್ಣದ ವಸ್ತ್ರ ಧರಿಸಬೇಕು ಎಂದು ಸೂಚಿಸಲಾಗಿದೆ. ದಿನಕ್ಕೆ 22 ರಿಂದ 25 ಕಿಲೋಮೀಟರ್ ಪಾದಯಾತ್ರೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ಪ್ರಮುಖ 119 ಭಾರತ್ ಯಾತ್ರೆ ಗಳಲ್ಲದೆ ಭದ್ರತಾಸಿಬ್ಬಂದಿ, ಫೋಟೋಗ್ರಾಫರ್ಸ್ ಗಳು, ಸಾಮಾಜಿಕ ಮಾಧ್ಯಮ ಸಿಬ್ಬಂದಿ ಸೇರಿದಂತೆ ಪಕ್ಷದ ತಂಡ ಮತ್ತು ವೈದ್ಯಕೀಯ ತಂಡದೊಂದಿಗೆ ತೆರಳಲಿದ್ದಾರೆ.
ಭಾರತ ಜೋಡು ಯಾತ್ರೆಯು ಸೆಪ್ಟೆಂಬರ್ 30ರಂದು ಕರ್ನಾಟಕ ತಲುಪಲಿದ್ದು ಬರೋಬ್ಬರಿ 21 ದಿನಗಳ ಕಾಲ ರಾಜ್ಯದ ವಿವಿಧೆಡೆ ಸಂಚರಿಸಲಿದ್ದಾರೆ. ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಬೆಂಗಳೂರು ಕಾಂಗ್ರೆಸ್ ಕಚೇರಿಯಲ್ಲಿಯೇ ಎಲ್ಲ ಯಾತ್ರಿಗಳಿಗೂ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ಇದನ್ನು ಒದಿ : https://cnewstv.in/?p=11058
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
Recent Comments