Breaking News

ಕಾರು ಅಪಘಾತ : ಶಿವ ಸಂಗ್ರಾಮ್ ಮುಖ್ಯಸ್ಥ ವಿನಾಯಕ್ ಮೇಟೆ ದುರ್ಮರಣ

Cnewstv.in / 14.08.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕಾರು ಅಪಘಾತ : ಶಿವ ಸಂಗ್ರಾಮ್ ಮುಖ್ಯಸ್ಥ ವಿನಾಯಕ್ ಮೇಟೆ ದುರ್ಮರಣ

ಬೆಂಗಳೂರು : ಮಹಾರಾಷ್ಟ್ರದ ರಾಯಗಡ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ಶಿವಸಂಗ್ರಾಮ ಮುಖ್ಯಸ್ಥರು ಹಾಗೂ ಮಾಜಿ ಸಚಿವ ವಿನಾಯಕ್ ಮೇಟೆ ಮೃತಪಟ್ಟಿದ್ದಾರೆ ಎಂದು ರಾಯಗಡ ಜಿಲ್ಲಾಧಿಕಾರಿ ಮಹೇಂದ್ರ ಕಲ್ಯಾಣ್‌ಕರ್ ಖಚಿತಪಡಿಸಿದ್ದಾರೆ.

XUV ಯಲ್ಲಿ ಪ್ರಯಾಣಿಸುತ್ತಿದ್ದ ಮೇಟೆ ಅವರು ಪುಣೆಯಿಂದ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ವಿನಾಯಕ್ ಮೇಟೆ ಅವರ ತಲೆ, ಕುತ್ತಿಗೆ, ಕೈಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ಕೂಡಲೇ ಅವರನ್ನು ಮಹಾತ್ಮ ಗಾಂಧಿ ಮಿಷನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಮರಾಠಾ ಮೀಸಲಾತಿ ಕುರಿತು ಚರ್ಚೆಗಾಗಿ ಅವರು ಮುಂಬೈಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಅಪಘಾತವಾಗಿದೆ. ಕಾರಿನಲ್ಲಿದ್ದ ಮಾಜಿ ಸಚಿವರ ಜೊತೆಗೆ ಭದ್ರತಾ ಸಿಬ್ಬಂದಿಗಳೂ ಇದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವಿಸ್ ಅವರು ಮುಂಬೈನ ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ವಿನಾಯಕ್ ಮೇಟೆ ಅವರು ಪತ್ನಿ, ಒಬ್ಬ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮೇಟೆ ಅವರ ನಿಧನಕ್ಕೆ ರಾಜ್ಯದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನು ಒದಿ : https://cnewstv.in/?p=10823

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*