3,419 ಕೋಟಿ ರೂ. ಗೃಹಬಳಕೆ ವಿದ್ಯುತ್ ಬಿಲ್ ನೋಡಿ ಕಂಗಾಲಾದ ಮನೆಮಂದಿ.
Cnewstv.in / 27.07.2022 / ಮಧ್ಯಪ್ರದೇಶ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
3,419 ಕೋಟಿ ರೂ. ಗೃಹಬಳಕೆ ವಿದ್ಯುತ್ ಬಿಲ್ ನೋಡಿ ಕಂಗಾಲಾದ ಮನೆಮಂದಿ.
ಮಧ್ಯಪ್ರದೇಶ : ಬರೋಬ್ಬರಿ 3,419 ಕೋಟಿ ರೂಪಾಯಿ ಗೃಹಬಳಕೆ ವಿದ್ಯುತ್ ಬಿಲ್ ನೋಡಿ ಮನೆಮಂದಿಯಲ್ಲಾ ಕಂಗಾಲಾದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಗರದ ಶಿವವಿಹಾರ ಕಾಲೋನಿಯಲ್ಲಿ ನಡೆದಿದೆ.
ಸಂಜೀವ್ ಕಂಕಣ್ ಮತ್ತು ಪ್ರಿಯಾಂಕಾ ಗುಪ್ತ ಅವರ ಮನೆಯ ಗೃಹಬಳಕೆಯ ವಿದ್ಯುತ್ ಮೊತ್ತ ಕೋಟಿ ರೂಪಾಯಿಗಳಲ್ಲಿ ನೋಡಿ ಸಂಜೀವ್ ತಂದೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮಾನವ ದೋಷ ಎಂದು ಆರೋಪಿಸಿ ಮಧ್ಯಪ್ರದೇಶ ಸರ್ಕಾರವು 3,419 ಕೋಟಿ ರೂಪಾಯಿ ಬದಲಾಗಿ 1300 ರೂಪಾಯಿ ಬಿಲ್ ಅನ್ನು ನೀಡಿದೆ.
ಎಂಪಿಎಂಕೆವಿವಿಸಿ ಜನರಲ್ ಮ್ಯಾನೇಜರ್ ನಿತಿನ್ ಮಾಂಗ್ಲಿಕ್ ಮಾತನಾಡಿ, ಇದೊಂದು ಮಾನವ ದೋಷ. ಅಲ್ಲದೇ ಸಂಬಂಧಪಟ್ಟ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ನೌಕರನು ಸಾಫ್ಟ್‌ವೇರ್‌ನಲ್ಲಿ ಸೇವಿಸಿದ ಘಟಕಗಳ ಬದಲಿಗೆ ಗ್ರಾಹಕ ಸಂಖ್ಯೆಯನ್ನು ನಮೂದಿಸಿದ, ಹೆಚ್ಚಿನ ಮೊತ್ತದೊಂದಿಗೆ ಬಿಲ್‌ಗೆ ಕಾರಣವಾಯಿತು. ಸರಿಪಡಿಸಿದ ₹1,300 ಬಿಲ್ ಅನ್ನು ವಿದ್ಯುತ್ ಗ್ರಾಹಕರಿಗೆ ನೀಡಲಾಗಿದೆ, ಎಂದರು.
ಇದನ್ನು ಒದಿ : https://cnewstv.in/?p=10649
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
3 419 ಕೋಟಿ ರೂ. ಗೃಹಬಳಕೆ ವಿದ್ಯುತ್ ಬಿಲ್ ನೋಡಿ ಕಂಗಾಲಾದ ಮನೆಮಂದಿ. 2022-07-27