Breaking News

ಜಪಾನ್ : ಭಾಷಣ ಮಾಡುವಾಗ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ.

Cnewstv.in / 08.07.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಜಪಾನ್ : ಭಾಷಣ ಮಾಡುವಾಗ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ.

ನವದೆಹಲಿ : ಜಪಾನ್ ನ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ ಇಂದು ದಾಳಿ ನಡೆದಿದೆ.

ಜಪಾನ್ ನ ನಾರಾ ನಗರದಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಗುಂಡಿನಾ ದಾಳಿ ನಡೆದಿದ್ದು, ತೀವ್ರ ರಕ್ತಸ್ರಾವದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಸಿದುಬಿದ್ದಿದ್ದ ಶಿಂಜೊವನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇದೇ ತಿಂಗಳು 10 ರಂದು ಜಪಾನಿನ ಸಂಸತ್ ಮೇಲ್ಮನೆ ಚುನಾವಣೆ ನಡೆಯುತ್ತಿದ್ದು ಅದಕ್ಕೆ ಸಂಬಂಧಿಸಿದಂತೆ ಪ್ರಚಾರ ಭಾಷಣ ಮಾಡುವ ವೇಳೆ ಹಿಂಬದಿಯಿಂದ ಬಂದ ವ್ಯಕ್ತಿಯು ಶಾಟ್ ಗನ್ ನಿಂದ ಗುಂಡಿನ ದಾಳಿಯನ್ನು ನಡೆಸಿದ್ದಾರೆ.

ನಾರಾ ನಿವಾಸಿ 41 ವರ್ಷದ ಟೆಟ್ಸುಯಾ ಎಂಬುವನು ಗುಂಡಿನ ದಾಳಿಯನ್ನು ನಡೆಸಿದ್ದಾನೆ ಎಂದು ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.

ಜಪಾನ್‌ನ ದೀರ್ಘಾವಧಿಯ ಪ್ರಧಾನ ಮಂತ್ರಿಯಾದ ಶಿಂಜೊ ಅಬೆ ಅವರು 2020 ರ ಆಗಸ್ಟ್‌ನಲ್ಲಿ ಅನಾರೋಗ್ಯದ ಕಾರಣದಿಂದ ಕೆಳಗಿಳಿದಿದ್ದರು

ಇದನ್ನು ಒದಿ : https://cnewstv.in/?p=10422

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*