Breaking News

ಮಹಾರಾಷ್ಟ್ರದಲ್ಲಿ ಆರೆಂಜ್ ಅಲರ್ಟ್. 5 NDRF ತಂಡ ನಿಯೋಜನೆ.

Cnewstv.in / 06.07.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಮಹಾರಾಷ್ಟ್ರದಲ್ಲಿ ಆರೆಂಜ್ ಅಲರ್ಟ್. 5 NDRF ತಂಡ ನಿಯೋಜನೆ.

ನವದೆಹಲಿ : ಮಹಾರಾಷ್ಡದಲ್ಲಿ ವರುಣನ ಅಬ್ಬರ ಮುಂದುವರೆದಿದ್ದು ಮಹಾರಾಷ್ಟ್ರದಾದ್ಯಂತ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ರಾಜಧಾನಿ ಮುಂಬೈ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಅನೇಕ ಪ್ರದೇಶಗಳು ಜಲಾವೃತವಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮುಂಬೈಗೆ ಹಳದಿ ಅಲರ್ಟ್‌. ಥಾಣೆ ಮತ್ತು ಪಾಲ್ವರ್ ಪ್ರದೇಶಗಳಿಗೆ ಆರೆಂಜ್ ಅಲರ್ಟ್ ನೀಡಿದೆ. ಮುಂಬೈ ಸುತ್ತಮುತ್ತ ನಿನ್ನೆ ಭಾರೀ ಮಳೆಯಾಗಿದ್ದು ರೈಲ್ವೆ ಹಳಿ ಹಾಗೂ ರಸ್ತೆ ಮೇಲೆ ನೀರು ನಿಂತಿದೆ.

ಸಮುದ್ರ ಮಟ್ಟದಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆಯಿದೆ. ಸಮುದ್ರದಿಂದ ಜನರು ದೂರವಿರುವಂತೆ ಸೂಚನೆ ನೀಡಲಾಗಿದೆ. ಸಮುದ್ರದ ಅಲೆಗಳು 13 ಅಡಿ ಎತ್ತರಕ್ಕೆ ಏರುವ ನಿರೀಕ್ಷೆಯಿದೆ.‌

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ಸಹ ಭಾರೀ ಮಳೆಯಾಗುವ ಪ್ರದೇಶಗಳಲ್ಲಿ ಅಗತ್ಯವಿದ್ದಲ್ಲಿ ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ನಿಯೋಜಿಸಲಾಗಿದೆ.

NDRF ಐದು ತಂಡಗಳನ್ನು ಮುಂಬೈನಲ್ಲಿ ನಿಯೋಜಿಸಲಾಗಿದೆ ಮತ್ತು ತಲಾ ಒಂದು ತಂಡವು ನಾಗ್ಪುರ, ರಾಯಗಡದ ಮಹಾಡ್, ರತ್ನಗಿರಿಯ ಚಿಪ್ಲುನ್, ಕಲ್ಯಾಣ್-ಡೊಂಬಿವಲಿ ಮತ್ತು ಥಾಣೆ ಮುನ್ಸಿಪಲ್ ಪ್ರದೇಶದಲ್ಲಿ ಬೀಡುಬಿಟ್ಟಿದೆ.

ಇದನ್ನು ಒದಿ : https://cnewstv.in/?p=10385

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*