Breaking News

ಮತ್ತೆ ಮೂವರು ಶಿವಸೇನೆ ಶಾಸಕರು ಶಿಂಧೆ ಬಣಕ್ಕೆ,..

Cnewstv.in / 23.06.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಮತ್ತೆ ಮೂವರು ಶಿವಸೇನೆ ಶಾಸಕರು ಶಿಂಧೆ ಬಣಕ್ಕೆ,..

ನವದೆಹಲಿ : ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿದೆ. ಇತ್ತ ಸರ್ಕಾರ ಉಳಿಸಲು ಸಿಎಂ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನೆ ನಾಯಕರು, ಎನ್ ಸಿಪಿ ಮತ್ತು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದರೆ.

ಮಹಾ ವಿಕಾಸ ಅಘಾಡಿ(MVA) ಸರ್ಕಾರದ ಮೂವರು ಶಿವಸೇನೆ ಶಾಸಕರು ಅಸ್ಸಾಂನ ಗುವಾಹಟಿಗೆ ತೆರಳಿ ಸಚಿವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಗುಂಪನ್ನು ಸೇರಿಕೊಂಡಿದೆ.

ಮತ್ತೊಂದೆಡೆ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಮುಂಬೈಯಲ್ಲಿರುವ ಅವರ ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ, ತಂತ್ರಗಾರಿಕೆ ಮುಂದುವರಿದಿದೆ.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸರ್ಕಾರ ರಚಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು ಏಕನಾಥ್ ಶಿಂಧೆ ಬಂಡಾಯ ಬಣವನ್ನು ತೆಕ್ಕೆಗೆ ಎಳೆದುಕೊಳ್ಳಲು ನೋಡುತ್ತಿದೆ ಎಂದು ತಿಳಿದುಬಂದಿದೆ.

ಇದನ್ನು ಒದಿ : https://cnewstv.in/?p=10236

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*