Breaking News

ಗಾಯಗೊಂಡಿದ್ದ ಪಕ್ಷಿಯನ್ನ ರಕ್ಷಿಸಲು ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್..

Cnewstv.in / 12.06.2022 / ಮುಂಬೈ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಗಾಯಗೊಂಡಿದ್ದ ಪಕ್ಷಿಯನ್ನ ರಕ್ಷಿಸಲು ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್..

ಮುಂಬೈ : ಗಾಯಗೊಂಡಿದ್ದ ಪಕ್ಷಿಯನ್ನ ರಕ್ಷಿಸಲು ಹೋದ ಇಬ್ಬರೂ ಸಾವನ್ನಪ್ಪಿದ ಘಟನೆ ಮುಂಬೈನಾ ಬಾಂದ್ರಾ-ವರ್ಲಿ ಸೀ ಲಿಂಕ್‌ ರಸ್ತೆಯಲ್ಲಿ ನಡೆದಿದೆ.

ರಸ್ತೆಯಲ್ಲಿ ಗಾಯಗೊಂಡ ಪಕ್ಷಿಯನ್ನು ರಕ್ಷಿಸಲು ತಮ್ಮ ಕಾರಿ ನಿಂದ ಇಳಿದ 43 ವರ್ಷದ ಉದ್ಯಮಿ ಮತ್ತು ಅವರ ಚಾಲಕನಿಗೆ ಟ್ಯಾಕ್ಸಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾರೆ. ಈ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಅಗಿದ್ದು,
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಾಂದ್ರಾ ವರ್ಲಿ ಸೀ ಲಿಂಕ್ ಮಾರ್ಗದಲ್ಲಿ ಅವರ ಕಾರಿಗೆ ಒಂದು ಹಕ್ಕಿ ಡಿಕ್ಕಿ ಹೊಡೆದಿದೆ. ನಂತರ ಗಾಯಗೊಂಡ ಪಕ್ಷಿಯನ್ನು ಉಳಿಸಲು ಅಮರ್ ಮನೀಷ್ ಜರಿವಾಲಾ ಕೆಳಗಿಳಿದರು. ವೇಗವಾಗಿ ಬಂದ ಟ್ಯಾಕ್ಸಿ ಜರಿವಾಲಾ ಮತ್ತು ಅವರ ಡ್ರೈವರ್ ಶ್ಯಾಮ್ ಸುಂದರ್ ಕಾಮತ್ ಅವರಿಗೆ ಡಿಕ್ಕಿ ಹೊಡೆದಿದೆ. ಜರಿವಾಲಾರನ್ನ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರೆ, ಚಾಲಕ ಶ್ಯಾಮ್ ಸುಂದರ್ ಕಾಮತ್ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.

ಟ್ಯಾಕ್ಸಿ ಚಾಲಕ ರವೀಂದ್ರ ಕುಮಾರ್ ಜೈಸ್ವರ್ ವಿರುದ್ಧ ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಪ್ರಕರಣ ದಾಖಲಿಸಲಾಗಿದ್ದು ಬಂಧಿಸಲಾಗಿದೆ ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಇದನ್ನು ಒದಿ : https://cnewstv.in/?p=10129

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*