Breaking News

ಉದ್ಘಾಟನೆ ವೇಳೆಯೇ ಮುರಿದುಬಿದ್ದ ತೂಗು ಸೇತುವೆ.‌ ಚರಂಡಿಗೆ ಬಿದ್ದ ಗಣ್ಯರು : ವಿಡಿಯೋ ವೈರಲ್

Cnewstv.in / 09.06.2022 / ಮೆಕ್ಸಿಕೋ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಉದ್ಘಾಟನೆ ವೇಳೆಯೇ ಮುರಿದುಬಿದ್ದ ತೂಗು ಸೇತುವೆ.‌ ಚರಂಡಿಗೆ ಬಿದ್ದ ಗಣ್ಯರು : ವಿಡಿಯೋ ವೈರಲ್

ಮೆಕ್ಸಿಕೋ : ಹೊಸ ಸೇತುವೆ ಉದ್ಘಾಟನೆ ಮಾಡಿದ ಅತಿಥಿ-ಗಣ್ಯರು ಅದೇ ಸೇತುವೆಯಿಂದ ಕೆಲವೇ ಕ್ಷಣಗಳಲ್ಲಿ ಕೆಳಗೆ ಬಿದ್ದಂತಹ ಘಟನೆ ಮೆಕ್ಸಿಕೋ ನಗರದಲ್ಲಿ ನಡೆದಿದೆ.

ಮೆಕ್ಸಿಕೋದ ಕ್ಯುರ್ನಾವಾಕಾ ನಗರದಲ್ಲಿ ಹಳೆ ಸೇತುವೆ ಶಿಥಿಲಗೊಂಡಿದೆ ಎಂದು ಅದನ್ನು ಕೆಡವಿ ಹೊಸ ತೂಗು ಸೇತುವೆ ನಿರ್ಮಾಣ ಮಾಡಲಾಗಿತ್ತು. ಈ ಸೇತುವೆ ಉದ್ಘಾಟನೆಯನ್ನು ನಗರ ಪಾಲಿಕೆ ಮೇಯರ್ ಉಪಮೇಯರ್ ಹಾಗೂ ಪಾಲಿಕೆ ಸದಸ್ಯರು ಉದ್ಘಾಟಿಸಿದರು.

ನಂತರ ಅದೇ ಸೇತುವೆ ಮೇಲೆ ಗಣ್ಯರು, ಪತ್ರಕರ್ತರು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನರು ಅದೇ ಸೇತುವೆ ಮೇಲೆ ನಡೆದುಕೊಂಡು ಹೋಗುವಾಗ ಸೇತುವೆ ತುಂಡಾಗಿದೆ ಪರಿಣಾಮವಾಗಿ ಎಲ್ಲರೂ ಚರಂಡಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಅವರು ಕೆಳಗೆ ಬಿದ್ದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನು ಒದಿ : https://cnewstv.in/?p=10100

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*